ನಾಪತ್ತೆಯಾದ ಬಾಲಕಿ ಗಂಟೆಗಳೊಳಗೆ ಪತ್ತೆ

0
67

ಕುಂಬಳೆ: ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವ್ಯಥೆಯಿಂದ ಮನೆಯಿಂದ ನಾಪತ್ತೆಯಾದ ಬಾಲಕಿಯನ್ನು  ಪೊಲೀಸರು ಗಂಟೆಗಳೊಳಗೆ ಪತ್ತೆಹಚ್ಚಿದ್ದಾರೆ. ನಿನ್ನೆ ಮಧ್ಯಾಹ ೧೨ಗಂಟೆಗೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಹದಿನಾರರ ಹರೆಯದ ಬಾಲಕಿ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಸಂಜೆ ಬಂದ್ಯೋಡಿನಲ್ಲಿ ಬಸ್ ತಡೆದುನಿಲ್ಲಿಸಿ ತಪಾಸಣೆ ನಡೆಸಿದಾಗ ಬಾಲಕಿಯನ್ನು ಪತ್ತೆಹಚ್ಚಲಾಗಿದೆ. ಬಾಲಕಿಯನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಕೇಸು ದಾಖಲಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY