ಐ.ಎಸ್ ಪರ ಫೇಸ್‌ಬುಕ್ ಪೋಸ್ಟ್: ಓರ್ವ ಸೆರೆ

0
31

ಮಲಪ್ಪುರಂ: ಜಾಗತಿಕ ಉಗ್ರಗಾಮಿ ಸಂಘಟನೆಗಳಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಪರ ಫೇಸ್ ಬುಕ್‌ನಲ್ಲಿ ಸಂದೇಶ ರವಾನಿಸಿದ ವ್ಯಕ್ತಿಯನ್ನು ಪೊಲೀ ಸರು ಬಂಧಿಸಿದ್ದಾರೆ.

ಮಲಪ್ಪುರಂ ಮಂಜೇರಿ ಅನತ್‌ಯಂ ಕಳತ್ತಾಂಜೂಲ್ ತಡಿಯ ಆಸ್ಕರ್ (೪೭) ಬಂಧಿತ ವ್ಯಕ್ತಿ. ಐಎಸ್‌ನ್ನು ಬೆಂಬಲಿಸಿ  ಮತೀಯ ಸಾಮರಸ್ಯಕ್ಕೆ ಧಕ್ಕೆಯುಂಟುಮಾಡುವ ರೀತಿಯ ವಿದ್ವೇಷ ಮೂಡಿಸುವ ಸಂದೇಶವನ್ನು ಫೇಸ್‌ಬುಕ್‌ನಲ್ಲಿ ರವಾನಿಸಿದ ಆರೋಪದಂತೆ ಮಲಪ್ಪುರಂ ಪೊಲೀಸರು ಆಸ್ಕರ್‌ನ ವಿರುದ್ಧ ಮೊದಲು ಕೇಸು ದಾಖಲಿ ಸಿಕೊಂಡಿದ್ದರು. ಮಲಪ್ಪುರಂ ಡಿವೈಎಸ್ಪಿ ಜಲೀಲ್ ತೋಟತ್ತಿಲ್, ಇನ್ ಸ್ಪೆಕ್ಟರ್ ಎನ್.ಟಿ. ಬೈಜು ನೇತೃತ್ವದ ಪೊಲೀಸರು ಆತನನ್ನು ಬಂಧಿಸಿ ದ್ದಾರೆ. ಬಂಧಿತ ಆಸ್ಕರ್‌ನ ಮೇಲೆ ಪೊಲೀಸರು ಕೆಲವು ದಿನ ಗಳಿಂದ ಗುಪ್ತವಾಗಿ ನಿಗಾ ಇರಿಸಿ ಕೊಂಡಿದ್ದು ಆತನ ಎಲ್ಲಾ ಚಟುವಟಿ ಕೆಗಳ ಮೇಲೂ ಕಣ್ಣಿಸಿರಿದ್ದರು.

NO COMMENTS

LEAVE A REPLY