ಪೆರಿಯ ಅವಳಿ ಕೊಲೆ ಪ್ರಕರಣ: ಸಿಪಿಎಂ ನೇತಾರರ ಬಂಧನ, ಜಾಮೀನು

0
70

ಕಾಸರಗೋಡು: ಪೆರಿಯ ಕಲ್ಯೋಟ್‌ನ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ (೧೯) ಮತ್ತ್ತು ಶರತ್‌ಲಾಲ್ (೨೩)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂನ ಉದುಮ ಏರಿಯಾ ಕಾರ್ಯದರ್ಶಿ ಹಾಗೂ ಜಿಲ್ಲಾ ಸಮಿತಿ ಸದಸ್ಯರೂ ಆಗಿರುವ ಕೆ. ಮಣಿಕಂಠನ್ ಮತ್ತು ಸಿಪಿಎಂನ ಪೆರಿಯ ಲೋಕಲ್ ಸಮಿತಿ ಕಾರ್ಯದರ್ಶಿ ಎನ್. ಬಾಲಕೃಷ್ಣನ್ ರನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ಪುರಾವೆಗಳನ್ನು ನಾಶಗೊಳಿಸುವಿಕೆ, ಕೊಲೆ ಆರೋಪಿಗಳನ್ನು ತಲೆಮರೆಸಿಕೊಂಡು ಜೀವಿಸಲು ಸಹಾಯವೊದಗಿಸುವಿಕೆ ಎಂಬೀ ಆರೋಪದಂತೆ ಈ ಇಬ್ಬರನ್ನು ಅವಳಿ ಕೊಲೆ ಪ್ರಕರಣದಲ್ಲಿ  ಆರೋಪಿಗಳನ್ನಾಗಿ ಸೇರ್ಪಡೆಗೊಳಿಸಲಾಗಿದೆ.

ಬಂಧಿತರನ್ನು ಕ್ರೈಂ ಬ್ರಾಂಚ್  ಪೊಲೀಸರು ನಿನ್ನೆ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ರನ್ನು ನ್ಯಾಯಾಲಯದಲ್ಲಿ  ಹಾಜರುಪಡಿಸಲಾಗಿದೆ. ಬಳಿಕ ತಲಾ ೨೫೦೦ ರೂ.ಗಳಂತೆ ಇಬ್ಬರು ವ್ಯಕ್ತಿಗಳಿಗೆ ಜಾಮೀನು, ಅಗತ್ಯವುಂಟಾದಾಗಲೆಲ್ಲಾ ತನಿಖಾ ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕೆಂಬ ನಿಬ್ಬಂಧನೆಗಳಡಿ ಬಂಧಿತರಿಗೆ ಬಳಿಕ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮಣಿಕಂಠನ್ ರಾಜ್ಯ ಯುವಜನ ಕಲ್ಯಾಣ ಮಂಡಳಿಯ ಸದಸ್ಯರೂ ಆಗಿದ್ದಾರೆ.

ಇದೇ ಕೊಲೆ ಪ್ರಕgಣದ ಎಂಟನೇ ಆರೋಪಿ ವೆಳತ್ತೋಳಿ ಪಾಕಾದ ಎ ಸುಬೀಶ್ ಶಾರ್ಜಾಕ್ಕೆ ಪರಾರಿಯಾಗಿದ್ದು, ಆತನನ್ನು ಅಲ್ಲಿಂದ ಸೆರೆಹಿಡಿದು ಊರಿಗೆ ತಲುಪಿಸಲು ಇಂಟರ್‌ಪೋಲ್  ರೆಡ್ ಕಾರ್ನರ್ ನೋಟೀಸನ್ನು  ಜ್ಯಾರಿಗೊಳಿಸಲು ಕ್ರೈಂ ಬ್ರಾಂಚ್ ಡಿವೈಎಸ್ಪಿ ಎಂ.ಪ್ರದೀಪ್ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಇಂದು ಪರಿಹಣಿಸಲಿದೆ.

‘ಇದು ಯುಡಿಎಫ್ ಹೂಡಿದ ರಾಜಕೀಯ ಒಳಸಂಚು’

ಕಲ್ಯೋಟ್ ಅವಳಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಸೇರ್ಪಡೆಗೊಳಿಸಿದ್ದ  ಯುಡಿಎಫ್ ಹೂಡಿದ ರಾಜಕೀಯ ಒಳಸಂಚಿನಂತೆ ಪೊಲೀಸರು ಹೆಣೆದ ಚಿತ್ರಕಥೆಯಾಗಿದೆಯೆಂದು  ಸಿಪಿಎಂ ಉದುಮ ಏರಿಯಾ ಕಾರ್ಯದರ್ಶಿ ಕೆ. ಮಣಿಕಂಠನ್ ಆರೋಪಿಸಿದ್ದಾರೆ.

ನಾನಾಗಲಿ, ಬಾಲಕೃಷ್ಣನ್ ಆಗಲಿ ಇಂತಹ ವಿಷಯಗಳಲ್ಲಿ  ಮಧ್ಯಸ್ಥಿಕೆ ವಹಿಸುವ ವ್ಯಕ್ತಿಗಳಲ್ಲ. ಅದು ಎಲ್ಲರಿಗೂ ತಿಳಿದಿದೆ. ಇದು ಪೊಲೀಸ್ ಠಾಣೆಯಲ್ಲೇ ಜಾಮೀನು ಲಭಿಸುವ ಒಂದು  ಸಾಧಾರಣ ಕೇಸು ಆಗಿದೆ.  ಆದರೂ ಯಾವುದೇ ರೀತಿಯ ವಿವಾದಕ್ಕೆ ದಾರಿ ಮಾಡಿಕೊಡದೆ ಇರಲು ನಾನು ನ್ಯಾಯಾಲಯದಲ್ಲಿ ಹಾಜರಾಗಿದ್ದೇನೆ. ನಾನು ಕಾನೂನನ್ನು ಅಂಗೀಕರಿಸುತ್ತೇನೆ.  ನನ್ನ ವಿರುದ್ಧ ಉಂಟಾದ ಕೇಸನ್ನು ರಾಜಕೀಯವಾಗಿ ಎದುರಿಸುವೆನೆಂದು ಅವರು ತಿಳಿಸಿದ್ದಾರೆ.

NO COMMENTS

LEAVE A REPLY