ಅಕ್ರಮ ಬಂದೂಕು ಸಹಿತ ಬ್ರಾಂಚ್ ಸೆಕ್ರೆಟರಿಯ ಪುತ್ರ, ಸಹಚರನ ಬಂಧನ

0
69

ಕಾಸರಗೋಡು: ಮೇಲ್ಪರಂಬ ಬಳಿಯ ಚೆಂಬರಿಕದಿಂದ ವಿದೇಶ ನಿರ್ಮಿತ ಅಕ್ರಮ ಬಂದೂಕು ವಶಪಡಿಸಿಕೊಂಡ ಪೊಲೀಸರು ಇನ್ನೋರ್ವನನ್ನು ಬಂಧಿಸಿದ್ದಾರೆ.

ಚೆಂಬರಿಕದ ಶಾಫಿ ಎಂಬವರ ಪುತ್ರ ಮುಹಮ್ಮದ್ ಸಾಲಿ (೨೮)ಯನ್ನು ಮೇಲ್ಪರಂಬ ಎಸ್.ಐ. ಪಿ.ಬಿ. ಸಂಜಯ್ ಕುಮಾರ್ ಹಾಗೂ ತಂಡ ಸೆರೆ ಹಿಡಿದಿದೆ. ಈತನನ್ನು ಇಂದು ನ್ಯಾಯಾಲ ಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಚೆಂಬರಿಕ ಬೀಚ್ ಸಮೀಪದ ಎ.ಎಂ. ಶಂಸೀರ್ (೨೩) ಎಂಬಾತನನ್ನು ನಿನ್ನೆ ಮಧ್ಯಾಹ್ನ ವೇಳೆ ಬಂದೂಕು ಸಹಿತ ಸೆರೆ ಹಿಡಿಯಲಾಗಿತ್ತು. ಸ್ಪೆಶಲ್ ಬ್ರಾಂಚ್ ಡಿವೈಎಸ್‌ಪಿಗೆ ಲಭಿಸಿದ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಮನೆಯನ್ನು ಸುತ್ತುವರಿದು ಬಂದೂಕು ಸಹಿತ ಶಂಸೀರ್‌ನನ್ನು  ಸೆರೆ ಹಿಡಿದಿದ್ದಾರೆ. ಪೊಲೀಸರು ತಲುಪುವಾಗ ಶಂಸೀರ್ ಬಂದೂಕನ್ನು ಸೊಂಟದಲ್ಲಿ ತುರುಕಿಸಿಟ್ಟು ನಿದ್ರಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈತನನ್ನು ತನಿಖೆಗೊಳಪಡಿಸಿದಾಗ ಬಂದೂಕಿಗೆ ಸಂಬಂಧಿಸಿ ಇನ್ನೂ ಕೆಲವರಿಗೆ ನಂಟು ಇರುವುದಾಗಿ ತಿಳಿದು ಬಂ ದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಎನ್.ಐ.ಎ. ಈ ಹಿಂದೆ ಕಸ್ಟಡಿಗೆ ತೆಗೆದು ತನಿಖೆಗೊಳಿಸಿದ ಚೆಂಬರಿಕದ ಸೋಣ್ ಎಂದು ಕರೆಯಲ್ಪಡುವ ತಸ್ಲಿಂ  ತನಗೆ ಬಂದೂಕು ನೀಡಿದ್ದಾನೆಂದು ಶಂಸೀರ್ ಹೇಳಿಕೆ ನೀಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ತಸ್ಲಿಂನನ್ನು ವಾರಂಟ್ ಪ್ರಕರಣವೊಂದಕ್ಕೆ ಸಂಬಂಧಿಸಿ ಇತ್ತೀಚೆಗೆ ಬೇಕಲ  ಪೊಲೀಸರು ಸೆರೆಹಿಡಿದಿದ್ದರು. ಈತ ಇದೀಗ ಜಿಲ್ಲಾ ಜೈಲಿನಲ್ಲಿ  ರಿಮಾಂಡ್‌ನಲ್ಲಿದ್ದಾನೆ.

ಪ್ರಕರಣದಲ್ಲಿ ಇನ್ನೂ ಕೆಲವು ಮಂದಿ ಶಾಮೀಲಾಗಿದ್ದಾರೆಂದೂ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ನಿನ್ನೆ ಸೆರೆಗೀಡಾದ ಶಂಸೀರ್ ಪ್ರಮುಖ ಆಡಳಿತ ಪಕ್ಷದ ಮಲೆನಾಡು ಪ್ರದೇಶದ ಬ್ರಾಂಚ್ ಸೆಕ್ರೆಟರಿಯ ಮಗನಾಗಿದ್ದಾನೆಂದೂ ಸೂಚನೆಯಿದೆ.

NO COMMENTS

LEAVE A REPLY