ಐಲ ಕ್ಷೇತ್ರದ ವಠಾರದಲ್ಲಿ ತಂಡದಿಂದ ಘರ್ಷಣೆಗೆತ್ನ ೫೩ ಮಂದಿ ವಿರುದ್ಧ ಕೇಸು

0
35

ಉಪ್ಪಳ: ಐಲ ಕ್ಷೇತ್ರದ ವಠಾರದಲ್ಲಿ ಯುವಕರ ತಂಡವೊಂದು ಘರ್ಷಣೆಗೆ ಯತ್ನಿಸಿದ ಸಂಬಂಧ ೫೩ ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಜಾಮೀನುರಹಿತ ಕೇಸು ದಾಖಲಿಸಿದ್ದಾರೆ.  ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಕ್ಲಾರ್ಕ್ ಪುರುಷೋತ್ತಮ ನೀಡಿದ ದೂರಿನಂತೆ ಶರೀಫ್ ಕುಕ್ಕಾರ್, ಫಯಾಜ್ ಕೋಲಾರಗುಡ್ಡೆ, ರಾಫಿ ಕೋಲಾರಗುಡ್ಡೆ ಹಾಗೂ ಇತರ ೫೦ ಮಂದಿ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಈತಿಂಗಳ ೧೩ರಂದು ೭.೩೦ಕ್ಕೆ ಕ್ಷೇತ್ರದ ಕಾಂಪೌಂಡ್‌ನೊಳಗೆ ಅತಿಕ್ರಮಿಸಿತ ತಂಡ ನೌಕರರನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿ ಕ್ಷೇತ್ರ ಮುಂಭಾಗದಲ್ಲಿ ನಿಲ್ಲಿಸಿದ ಕಾರನ್ನು ಹಾನಿಗೊಳಿಸಿದ್ದಾರೆಂದು ದೂರಲಾಗಿದೆ.

NO COMMENTS

LEAVE A REPLY