ಬಸ್ ಕಂಡಕ್ಟರ್‌ನೊಂದಿಗೆ ಜಗಳಕ್ಕಿಳಿದ ಇಬ್ಬರ ಸೆರೆ

0
58

ಬದಿಯಡ್ಕ: ಬಸ್ ಕಂಡಕ್ಟರ್ ನೊಂದಿಗೆ ಜಗಳಕ್ಕಿಳಿದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಬದಿಯಡ್ಕ ಬಳಿಯ ಬದಿಯೋಡು ನಿವಾಸಿ ಹರೀಶ್ (೩೦), ಮುಳ್ಳೇರಿಯದ ಮನೋಜ್ (೨೭) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ನಿನ್ನೆ ರಾತ್ರಿ ೮.೩೦ರ ವೇಳೆ ಬದಿಯಡ್ಕ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಈ ಇಬ್ಬರು ಖಾಸಗಿ ಬಸ್‌ನ ಕಂಡಕ್ಟರ್‌ನೊಂದಿಗೆ ಚಿಲ್ಲರೆಗೆ ಸಂಬಂಧಿಸಿ ವಾಗ್ವಾದಕ್ಕಿಲಿದಿದ್ದಾರೆ. ಕೂಡಲೇ ತಲುಪಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

NO COMMENTS

LEAVE A REPLY