ಪ್ರದೀಪ್ ಕುಮಾರ್ ಸಾವಿನಲ್ಲಿ ನಿಗೂಢತೆಯಿಲ್ಲ- ಪೊಲೀಸ್

0
31

ಕಾಸರಗೋಡು: ಮಧೂರು ಸಾಯಿಬಾಬಾ ಮಂದಿರ ಬಳಿಯ ಕೋಡಿಮಜಲ್ ಹೌಸ್‌ನ  ರಾಮಣ್ಣ ಗಟ್ಟಿ-ಸರೋಜಿನಿ ದಂಪತಿಯ ಪುತ್ರ ಪ್ರದೀಪ್ ಕುಮಾರ್ ಗಟ್ಟಿ (೪೦)ರ ಸಾವು ಆತ್ಮಹತ್ಯೆಯಾಗಿದೆಯೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸೂಚಿಸಲಾಗಿದೆಯೆಂದು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ವಿದ್ಯಾನಗರ ಪೊಲೀಸರು ತಿಳಿಸಿದ್ದಾರೆ.

ಪ್ರದೀಪ್ ಕುಮಾರ್ ಮಧೂರು   ಪಟ್ಲ ರಸ್ತೆ ಬಳಿಯ  ಪತ್ನಿಯ ಮನೆಪಕ್ಕದ ಹೊಲದಲ್ಲಿ   ಧೋತಿಯಿಂದ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾವಿನ ಬಗ್ಗೆ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರದೀಪ್ ಕುಮಾರ್‌ರ ಮೃತದೇಹವನ್ನು ಪೊಲೀಸರು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿತ್ತು.  ಫೋರೆನ್ಸಿಕ್  ತಜ್ಞ ಡಾ|  ಗೋಪಾಲಕೃಷ್ಣ ಪಿಳ್ಳೆ ಮೃತದೇಹದ ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.

ಧರಿಸಿದ್ದ ಧೋತಿಯನ್ನು ಕಳಚಿ ಪ್ರದೀಪ್ ಕುಮಾರ್ ಸ್ವಯಂ ಆಗಿ ನೇಣು ಬಿಗಿದು ಆತ್ಮಹತ್ಯೆಗೈದಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ಸ್ಪಷ್ಟಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅದರಿಂದಾಗಿ ಅವರ ಸಾವಿನಲ್ಲಿ ಶಂಕೆಯೇನೂ ಇಲ್ಲವೆಂದೂ ಪೊಲೀಸ್ ಸರ್ಜನ್ ತಿಳಿಸಿರುವುದಾಗಿ ವಿದ್ಯಾನಗರ  ಪೊಲೀಸರು ತಿಳಿಸಿದ್ದಾರೆ.  ಪ್ರದೀಪ್ ಕುಮಾರ್ ಈ ಹಿಂದೆಯೂ ಇದೇ ರೀತಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದನೆಂಬ ಮಾಹಿತಿ  ಅವರ ಸಂಬಂಧಿಕರನ್ನು ವಿಚಾರಿಸಿದಾಗ  ತಿಳಿದುಬಂದಿದೆಯೆಂದೂ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY