ಅಪಹರಣ ದೂರು: ವಿದ್ಯಾರ್ಥಿನಿ ಪ್ರಿಯತಮನೊಂದಿಗೆ ವಿವಾಹ; ವೀಡಿಯೋ ಬಹಿರಂಗ

0
55

ಕುಂಬಳೆ: ಕುಂಟಂಗೇರಡ್ಕದಿಂದ ನಾಪತ್ತೆಯಾದ ಯುವತಿ ಪ್ರಿಯತಮನ ಜೊತೆ ವಿವಾಹವಾಗಿದ್ದಾಳೆ. ವಿವಾಹದ ಬಳಿಕ ನವದಂಪತಿಯರು ವಿವಾಹ ವೀಡಿಯೋ ಗೆಳೆಯರಿಗೆ, ಪೊಲೀಸರಿಗೆ ಕಳುಹಿಸಿದ್ದಾರೆ. ಕುಂಟಂಗೇರಡ್ಕದ ನಿವೃತ್ತ ಅಧ್ಯಾಪಕನ ಪುತ್ರಿ, ವಿದ್ಯಾರ್ಥಿನಿಯಾದ ಪಂಚಮಿ ಮಂಗಳೂರು ನಿವಾಸಿಯಾದ ಪ್ರಿಯತಮ ಸುಪ್ರೀತ್‌ನನ್ನು ವಿವಾಹವಾಗಿದ್ದಾಳೆ. ಇವರಿಬ್ಬರು ಮಾಲೆ ಧರಿಸಿರುವ ವೀಡಿಯೋದಲ್ಲಿ ಸುಪ್ರೀತ್ ಈ ರೀತಿ ತಿಳಿಸುತ್ತಾರೆ- ‘ಪಂಚಮಿಯೊಂದಿಗೆ ಸುಪ್ರೀತ್ ಎಂಬ ಹೆಸರುಳ್ಳ ನಾನು ಏಳು ವರ್ಷದಿಂದ ಪ್ರೀತಿಸುತ್ತಿದ್ದೇನೆ. ವಿವಾಹಕ್ಕೆ ಅವಳ ಮನೆಯವರು ವಿರೋಧಿಸಿದರು. ವಿವಾಹವಾಗದಿದ್ದರೆ ಅವಳು ಆತ್ಮಹತ್ಯೆಗೈಯ್ಯುವುದಾಗಿ ಬೆದರಿಸಿದಳು. ಆದುದ ರಿಂದ ಪಂಚಮಿಯನ್ನು ಕರೆದುಕೊಂಡು ಬಂದಿದ್ದೇನೆ. ಅಲ್ಲದೆ ಆಕೆಯನ್ನು ನಾನು ಅಪಹರಿಸಲಿಲ್ಲ. ವೀಡಿಯೋದಲ್ಲಿ ಪಂಚಮಿ ಈ ರೀತಿ ಹೇಳುತ್ತಾಳೆ. ‘ತನ್ನ ಸ್ವಂತ ಇಷ್ಟದಿಂದ ಪ್ರೀತಿಸಿದ ಯುವಕನ ಜೊತೆ ತೆರಳಿದ್ದೇನೆ. ತನ್ನನ್ನು ಯಾರು ಅಪಹರಿಸಲಿಲ್ಲ’. ಇನ್ನಾದರೂ ಶಾಂತಿಯುತವಾಗಿ ಜೀವಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾತ್ರ ದಾರಿ’.

ವೀಡಿಯೋ ಲಭಿಸಿರುವುದಾಗಿ ಕುಂಬಳೆ ಪೊಲೀಸರು ದೃಢೀಕರಿಸಿದ್ದಾರೆ. ಇವರಿಬ್ಬರನ್ನು ಠಾಣೆಯಲ್ಲೋ, ನ್ಯಾಯಾಲಯದಲ್ಲೋ ಶೀಘ್ರವೇ ಹಾಜರುಪಡಿಸಲಾಗುವುದೆಂದು ಪೊಲೀಸರು ನಿರೀಕ್ಷಿಸಿದ್ದಾರೆ. ಅದರ ಬಳಿಕ ಕೇಸಿನ ಮುಂದಿನ ಕ್ರಮ ಸ್ವೀಕರಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಸಂಜೆ ಪಂಚಮಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಸುಪ್ರೀತ್ ಪರಾರಿಯಾಗಿದ್ದನು. ಪುತ್ರಿಯನ್ನು ಅಪಹರಿಸಿರುವುದಾಗಿ ತಂದೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದರು.

ಪಂಚಮಿಯನ್ನು ಅನ್ಯಕೋಮಿನ ಯುವಕ ಕಾರಿನಲ್ಲಿ ಅಪಹರಿಸಿರುವುದಾಗಿ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಉಪ್ಪಳ ಐಲ ಕ್ಷೇತ್ರದ ಪರಿಸರದಲ್ಲಿ ಸಂಘರ್ಷಾವಸ್ಥೆ ಸೃಷ್ಟಿಯಾಗಿ ಲಾಠಿ ಚಾರ್ಜ್ ನಡೆಸಲಾಗಿತ್ತು. ಅದರ ಬಳಿಕ ಘಟನೆಯ ಸತ್ಯಾಂಶ ತಿಳಿಸುವ ವೀಡಿಯೋ ಬಹಿರಂಗಗೊಂಡಿದೆ.

NO COMMENTS

LEAVE A REPLY