ಮೀನು ಲಾರಿಯ ಚಾಲಕನಿಗೆ ಬೆದರಿಕೆಯೊಡ್ಡಿ ೧೫ ಸಾವಿರ ರೂ. ದರೋಡೆ

0
66

ಕುಂಬಳೆ: ಮೀನು ಸಾಗಾಟದ ಲಾರಿ ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ಹಣ ದರೋಡೆ ನಡೆಸಿರುವುದಾಗಿ ದೂರಲಾಗಿದೆ.

ನಿನ್ನೆ ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆ ರೈಲ್ವೇ ನಿಲ್ದಾಣ ಸಮೀಪ ಘಟನೆ ನಡೆದಿದೆ. ಮಂಗಳೂರಿನಿಂದ ಮೀನು ಹೇರಿ ಕಣ್ಣೂರು ಭಾಗಕ್ಕೆ ತೆರಳುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿ ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ೧೫,೦೦೦ ರೂಪಾಯಿ ದರೋಡೆ ನಡೆಸಿರುವುದಾಗಿ ದೂರಲಾಗಿದೆ. ಆದರೆ ಈಬಗ್ಗೆ ಲಿಖಿತ ದೂರು ಲಭಿಸಿಲ್ಲವೆಂದು ಪೊಲೀಸರು ತಿಳಿಸುತ್ತಿದ್ದಾರೆ. ಒಂದು ವಾರ ಹಿಂದೆಯೂ ಕುಂಬಳೆಯಲ್ಲಿ ಇದೇ ರೀತಿಯ  ಕೃತ್ಯ ನಡೆದಿತ್ತು. ರೈಲ್ವೇ ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಲಾರಿಯಿಂದ ೧೯,೫೦೦ ರೂಪಾಯಿ ಕಳವು ನಡೆಸಲಾಗಿತ್ತು. ಈಬಗ್ಗೆ ತನಿಖೆ ನಡೆಸುತ್ತಿರುವಂತೆಯೇ ಮತ್ತೆ ದರೋಡೆ ನಡೆಸಲಾಗಿದೆ.

ಕುಂಬಳೆ ಹಾಗೂ ಪರಿಸರ ಪ್ರದೇಶಗಳ ಹೆದ್ದಾರಿಯಲ್ಲಿ ದರೋಡೆ ತಂಡ ತೀವ್ರಗೊಂಡಿದೆ. ದರೋಡೆ ತಂಡಗಳ ವಿರುದ್ದ ಕಾರ್ಯಾಚರಣೆಗೆ ಪೊಲೀಸರು ಕ್ರಮ ಆರಂಭಿಸಿದ್ದಾರೆ.

NO COMMENTS

LEAVE A REPLY