ಐಲ ಕ್ಷೇತ್ರದ ಹಿರಿಯ ಅರ್ಚಕ ನಿಧನ

0
38

ಉಪ್ಪಳ: ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದ ಹಿರಿಯ ಅರ್ಚಕ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಮೆನೇಜರ್ ಐಲ ಕ್ಷೇತ್ರ ಪರಿಸರ ನಿವಾಸಿ ರಾಮಕೃಷ್ಣ ಮ್ಯಯ (೮೮) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಉಪ್ಪಳ, ಕಾಸರ ಗೋಡು ಸಹಿತ ಕರ್ನಾಟಕದ ವಿವಿಧ ಬ್ರಾಂಚ್‌ಗಳಲ್ಲಿ ಮೆನೇಜರ್ ಆಗಿ ಸೇವೆ ಸಲ್ಲಿಸಿ, ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಶಾಖೆ ಮಣಿಪಾಲ ದಲ್ಲಿ ಡೆಪ್ಯೂಟಿ ಪರ್ಸನಲ್ ಮೆನೇ ಜರ್ ಆಗಿ ನಿವೃತ್ತಿ ಹೊಂದಿದರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದರು. ಮೃತರು ಪತ್ನಿ ಸುಲೋಚನ ಮಯ್ಯ, ಮಕ್ಕಳಾದ ಶಿವಾನಂದ ಮಯ್ಯ, ಡಾ. ಗಣೇಶ ಮಯ್ಯ, ಸೊಸೆಯಂದಿರಾದ ರತ್ನ ಮಯ್ಯ, ಡಾ. ರೇಖಾ ಮಯ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 

NO COMMENTS

LEAVE A REPLY