ನಾಳೆ ಏಳು ಮತಗಟ್ಟೆಗಳಲ್ಲಿ ಮರುಮತದಾನ

0
69

ಕಾಸರಗೋಡು: ಕಳ್ಳಮತ ಚಲಾಯಿಸಿರುವುದಾಗಿ ಪತ್ತೆಹಚ್ಚಲಾದ ಕಾಸರಗೋಡು ಲೋಕಸಬಾ ಕ್ಷೇತ್ರ ಕ್ಕೊಳಪಟ್ಟ ನಾಲ್ಕು ಮತ್ತು ಕಣ್ಣೂರು ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಮೂರು ಸೇರಿದಂತೆ ಒಟ್ಟು ಏಳು ಮತಗಟ್ಟೆ

ಗಳಲ್ಲಿ ನಾಳೆ ಮರುಮತದಾನ ನಡೆಯಲಿದೆ.

ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೊಳಪಟ್ಟ ತೃಕರಿಪುರ ವಿಧಾನಸಭಾ ಕ್ಷೇತ್ರದ ಚೀಮೇನಿ ಕುಳಮಾಡು ಜಿಎಚ್‌ಎಸ್‌ನ ೪೮ನೇ ನಂಬ್ರದ ಮತಗಟ್ಟೆ, ಕಲ್ಯಾಶ್ಶೇರಿ ವಿಧಾನಸಭೆಯ ಪಿಲಾತ್ತರ ಯುಪಿ ಶಾಲೆ, ೧೯ನೇ ನಂಬ್ರದ ಮತಗಟ್ಟೆ ಪುದಿಯಂಙಾಡಿ ಜಮಾಯತ್ ಹೈಯರ್ ಸೆಕೆಂಡರಿ ಉತ್ತರ ಭಾಗದ ಬೂತ್ ನಂಬ್ರ ೬೯, ಪುದಿಯಂಙಾಡಿ ಜಮಾಯತ್ ಹೈಯರ್ ಸೆಕೆಂಡರಿ ತೆಂಕುಭಾಗದ ೭೦ನೇ ನಂಬ್ರದ ಮತಗಟ್ಟೆಗಳಿಗೆ ನಾಳೆ ಮರುಮತದಾನ ನಡೆಯಲಿದೆ.

ಅದೇ ರೀತಿ ಕಣ್ಣೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ತಳಿಪರಂಬ ವಿಧಾನಸಭಾ  ಕ್ಷೇತ್ರದ ಪಾಂಬುರುತ್ತಿ ಮಾಪಿಳ್ಳ ಎಯುಪಿ ಶಾಲೆಯ ಬೂತ್ ನಂಬ್ರ ೧೬೬, ಧರ್ಮಡಂ  ವಿಧಾನಸಭಾ ಕ್ಷೇತ್ರದ ಕುನ್ನೇರಿಕ ಯುಪಿ ಶಾಲೆ ಎಡಕುಂಭಾಗದ ಬೂತ್‌ನಂಬ್ರ ೫೨ ಮತ್ತು ಕುನ್ನಿರಿಕ ಯುಪಿ ಶಾಲೆಯ ತೆಂಕು ಭಾಗದ ೫೩ನೇ ನಂಬ್ರದ ಮತಗಟ್ಟೆಗಳಲ್ಲಿ ನಾಳೆ ಮರುಮತದಾನ ನಡೆಯಲಿದೆ.

ಕಳ್ಳಮತದಾನ ನಡೆದ ನಾಲ್ಕು ಮತಗಟ್ಟೆಗಳಿಗೆ ಮಾತ್ರವೇ ಮರುಮತ ದಾನ ನಡೆಸಲು ಚುನಾವಣಾ ಆಯೋಗ ಮೊನ್ನೆ ತೀರ್ಮಾನಿಸಿತ್ತು. ಬಳಿಕ ಇನ್ನೂ ಮೂರು   ಬೂತ್‌ಗಳಲ್ಲಿ ಮರುಮತ ದಾನ ನಡೆಸಲು ಚುನಾವಣಾ ಆಯೋಗ ನಿನ್ನೆ ತೀರ್ಮಾನ ಕೈಗೊಂಡಿತ್ತು.  ಆ ಮೂಲಕ ಮರುಮತದಾನ ನಡೆಯಲಿ ರುವ ಸಂಖ್ಯೆ ಈಗ ಏಳಕ್ಕೇರಿದೆ.

ಮತದಾನ ನಾಳೆ ಬೆಳಿಗ್ಗೆ ಆರಂ ಭಗೊಂಡು ಸಂಜೆ ೬ ಗಂಟೆ ತನಕ ಮುಂದುವರಿಯಲಿದೆ.

ಬಹಿರಂಗ ಪ್ರಚಾರಕ್ಕಾಗಿ ನಿನ್ನೆ ಸಂಜೆ ತನಕ ಮತ್ತೆ  ಅವಕಾಶ ನೀಡಲಾಗಿತ್ತು. ಕಾಸರಗೋಡು ಲೋಕಸಭಾ ಕ್ಷೇತ್ರದ ಪಿಲಾತ್ತರದಲ್ಲಿ  ಯುಡಿಎಫ್ ಉಮೇದ್ವಾರ ರಾಜ್ ಮೋಹನ್ ಉಣ್ಣಿತ್ತಾನ್ ನಡೆಸಿದ ಪ್ರಚಾರ ಸಭೆಯಲ್ಲಿ ನಿನ್ನೆ  ಯುಡಿಎಫ್  ಮತ್ತು ಎಡರಂಗ ಕಾರ್ಯಕರ್ತರ ಮಧ್ಯೆ ಘರ್ಷಣೆ ಭುಗಿಲೆದ್ದಿದ್ದು ಆ ವೇಳೆ ಕೆಲವು ಸಿಪಿಎಂ ಕಾರ್ಯಕರ್ತರು ರಾಜ್‌ಮೋಹನ್ ಉಣ್ಣಿತ್ತಾನ್‌ರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಗಾಯಗೊಂಡ ಅವರನ್ನು ಪಯ್ಯನ್ನೂರು ಪ್ರಿಯದರ್ಶಿನಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.

ಪಿಲಾತ್ತರದಲ್ಲಿ ನಿನ್ನೆ ನಡೆದ ಎಡರಂಗದ ಚುನಾವಣಾ  ಪ್ರಚಾರದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಜಯರಾಜ್  ಮಾತನಾಡುತ್ತಿದ್ದ ವೇಳೆ ಅಲ್ಲೇ ಪಕ್ಕದ ೫೦ ಮೀಟರ್ ದೂರದಲ್ಲಿ ಯುಡಿಎಫ್ ಪ್ರಚಾರ ಸಭೆ ಆರಂಭಗೊಂಡಿದೆ. ಸ್ವಾಗತ  ಭಾಷಣದ ಬಳಿಕ ಯುಡಿಎಫ್ ಅಭ್ಯರ್ಥಿ ಮಾತನಾಡಲಾರಂಭಿಸಿದಾಗ ಸಿಪಿಎಂ ಕಾರ್ಯಕರ್ತರ ತಂಡವೊಂದು ಅಲ್ಲಿಗೆ ಆಗಮಿಸಿ ಉಣ್ಣಿತ್ತಾನ್‌ರ ಕೈಯಿಂದ ಮೈಕ್ ಹಿಡಿದೆಳೆದು ಮೂಗಿಗೆ ಹೊಡೆದು ಹಲ್ಲೆಗೊಳಿಸಿರುವುದಾಗಿ ಆರೋಪಿಸಲಾ ಗಿದೆ. ಆ ವೇಳೆ ಅದನ್ನು ಚಿತ್ರೀಕರಿಸಲು ಬಂದ ಟಿವಿ ಚ್ಯಾನಲ್  ಪ್ರತಿನಿಧಿಗಳಿಗೂ  ಒಂದು ತಂಡ ಹಲ್ಲೆ ನಡೆಸಿದೆ. ಯುಡಿಎಫ್‌ನ ವಾಹನವನ್ನು ಹಾನಿಗೊಳಿಸಿದೆ. ಅದರಿಂದ ಯುಡಿಎಫ್‌ನ ಪ್ರಚಾರ ಸಭೆ   ಕೊನೆಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಕಾವಲು ಏರ್ಪ ಡಿಸಲಾಗಿದೆ. ಎನ್‌ಡಿಎ ಉಮೇದ್ವಾರ ರವೀಶ ತಂತ್ರಿ ಕುಂಟಾರು  ಬೂತ್ ವ್ಯಾಪ್ತಿಯಲ್ಲಿ  ನಿನ್ನೆ ಮತಯಾಚಿಸಿದರು.

NO COMMENTS

LEAVE A REPLY