ಸರಕಾರಿ ರಕ್ಷಿತಾರಣ್ಯದಲ್ಲಿ ಮಾನವನ ಕಾಲಿನ ಎಲುಬು ಪತ್ತೆ

0
41

ಅಡೂರು: ಸರಕಾರಿ ರಕ್ಷಿತಾರಣ್ಯದಲ್ಲಿ ನಿಗೂಢ ರೀತಿಯಲ್ಲಿ ಮಾನವನ ಕಾಲಿ ನೆಲುಬು ಪತ್ತೆಯಾಗಿದೆ.

ಅಡೂರು ನೂಜಿಬೆಟ್ಟು ಪೊಕ್ಕಳದ ಸರಕಾರಿ ರಕ್ಷಿತಾರಣ್ಯದ ತೋಡಿನ ಬಳಿ ಈ ಎಲುಬು ಪತ್ತೆಯಾಗಿದೆ. ತೊಡೆ ಭಾಗದ ಎಲುಬು ಮಾತ್ರವೇ  ಪತ್ತೆಯಾಗಿದೆ. ಈ ಪರಿಸರದ ಯುವಕನೋರ್ವ ಅರಣ್ಯಕ್ಕೆ ಜೇನು ಸಂಗ್ರಹಿಸಲು ಹೋದಾಗ ಇದು ಪತ್ತೆಯಾಗಿದೆ. ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಆದೂರು ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಎ.ವಿ. ಜೋನ್, ಎಸ್‌ಐ ಪಿ. ನಳಿನಾಕ್ಷನ್ ಅರಣ್ಯ ಇಲಾಖೆಯ ಸೆಕ್ಷನ್ ಫೋರೆಸ್ಟ್ ಆಫೀಸರ್ ಎನ್.ವಿ. ಸತ್ಯನ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆದಿದೆ. ಮೃತದೇಹದ ಇತರ ಭಾಗಗಳಿಗಾಗಿ    ವ್ಯಾಪಕ ಶೋಧ ನಡೆಸಿದರೂ ಪತ್ತೆ ಯಾಗಲಿಲ್ಲ.

ಇದು ಸುಮಾರು ಒಂದು ವರ್ಷ ಹಿಂದೆ ಮೃತಪಟ್ಟ ವ್ಯಕ್ತಿಯ ಎಲುಬಾಗಿರಬಹುದೆಂಬ ಶಂಕೆ ಪೊಲೀಸರದ್ದಾಗಿದೆ.  ಎಲುಬು ಪತ್ತೆಯಾದ ಜಾಗದ ಅಲ್ಪ ದೂರದಲ್ಲಿ ಹರಿದ ಅಂಗಿಯೊಂದು ಪತ್ತೆಯಾಗಿದೆ. ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಾಂಬ್ ಸ್ಕ್ವಾಡ್ ಮತ್ತು ಫೋರೆನ್ಸಿಕ್ ವಿಭಾಗದ ತಜ್ಞರು ಸ್ಥಳಕ್ಕಾಗಮಿಸಿ ಅಗತ್ಯದ ಮಾಹಿತಿ ಸಂಗ್ರಹಿಸಿದ್ದಾರೆ.

ಇದೇ ವೇಳೆ  ನೂಜಿಬೆಟ್ಟಿನಲ್ಲಿ ಒಂದು ವರ್ಷದ ಹಿಂದೆ ಯುವಕನೋರ್ವ ನಾಪತ್ತೆಯಾದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಬಿಸಿದೆ. ಆ ಹಿನ್ನೆಲೆಯಲ್ಲಿ ಪತ್ತೆಯಾದ ಎಲುಬು ಆ ವ್ಯಕ್ತಿಯದ್ದಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಅದಕ್ಕಾಗಿ ಎಲುಬನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಬೇಕಾಗಿದ್ದು, ಅದಕ್ಕಾಗಿ ಪೊಲೀಸರು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದಾರೆ. ಡಿಎನ್‌ಎ ಪರೀಕ್ಷಾ ವರದಿ ಲಭಿಸಿದ ಬಳಿಕವಷ್ಟೇ  ಯಾವುದೇ ಸ್ಪಷ್ಟ ನಿಲುವಿಗೆ ಬರಲುಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ. ತನಿಖೆ   ಮುಂ ದುವರಿಯುತ್ತಿದೆ.

NO COMMENTS

LEAVE A REPLY