ಐಲ ಕ್ಷೇತ್ರ ವಠಾರದಲ್ಲಿ ಘರ್ಷಣೆಗೆತ್ನ: ಇಬ್ಬರ ಸೆರೆ

0
46

ಮಂಜೇಶ್ವರ: ಐಲ ಕ್ಷೇತ್ರದ ವಠಾರದಲ್ಲಿ ಯುವಕರ ತಂಡವೊಂದು ಘರ್ಷಣೆಗೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಪೆರಿಂಗಡಿ ಪರಿಸರ ನಿವಾಸಿಗಳಾದ ಮೊಹಮ್ಮದ್ ಫಯಾಜ್ (೨೧), ಮೊಹಮ್ಮದ್ ಫೈಜ್ (೨೩) ಸೆರೆಗೀಡಾದವರು. ಇವರಿಗೆ ನ್ಯಾಯಾಲಯ ನಿನ್ನೆ ರಿಮಾಂಡ್ ವಿಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ ೧೩ರಂದು ರಾತ್ರಿ ೭.೩೦ರ ವೇಳೆ ಪ್ರಕರಣ ನಡೆದಿತ್ತು.  ಈ ಪ್ರಕgಣದಲ್ಲಿ ಒಟ್ಟು ೫೩ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY