ಬಸ್‌ನಿಂದ ನಾಲ್ಕೂವರೆ ಲೀಟರ್ ಮದ್ಯ ವಶ

0
45

ಉಪ್ಪಳ: ಬಸ್‌ನಿಂದ ವಾರೀಸುದಾರರಿಲ್ಲದ ನಾಲ್ಕೂವರೆ ಲೀಟರ್ ಮದ್ಯವನ್ನು ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆ ಅಧಿಕಾರಿಗಳು ವಶಪಡಿಸಿದ್ದಾರೆ. ನಿನ್ನೆ ರಾತ್ರಿ ೮ ಗಂಟೆಗೆ ಮಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸನ್ನು ತಪಾಸಣೆ ನಡೆಸಿದಾಗ ಹಿಂಬದಿ ಸೀಟಿನಡಿಯಲ್ಲಿ ಬಟ್ಟೆಯ ಚೀಲದಲ್ಲಿ ಮದ್ಯ ಪತ್ತೆಯಾಗಿದೆ. ೭೫೦ ಮಿಲ್ಲಿಯ ೬ ಬಾಟಲಿ ಒಟ್ಟು ನಾಲ್ಕೂವರೆ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಇದರಲ್ಲಿತ್ತು. ವಾಹನ ತಪಾಸಣೆಗೆ ಅಬಕಾರಿ ಇನ್‌ಸ್ಪೆಕ್ಟರ್ ಸಚಿನ್, ಪಿ.ಒಗಳಾದ ಇ.ಕೆ. ಬಿನೋಯ್, ಪಿ. ರಾಜೀವನ್, ಸಿಇಒಗಳಾದ ಮೋಹನ್ ಕುಮಾರ್, ಜಾಸ್ಮಿನ್ ಸೇವ್ಯಾರ್ ನೇತೃತ್ವ ನೀಡಿದರು. ಬಸ್‌ನಲ್ಲಿ  ಮದ್ಯ ಹಾಗೂ ಹೊಗೆಸೊಪ್ಪು ಉತ್ಪನ್ನಗಳ ಸಾಗಾಟ ವ್ಯಾಪಕಗೊಂಡಿದ್ದು, ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ಬಿಗುಗೊಳಿಸಿದ್ದಾರೆ.

NO COMMENTS

LEAVE A REPLY