ವಾರೀಸುದಾರರಿಲ್ಲದ ೧೦ ಕಿಲೋ ಹೊಗೆಸೊಪ್ಪು ಉತ್ಪನ್ನ ಬಸ್‌ನಿಂದ ವಶ

0
18

 

ಉಪ್ಪಳ: ವಾಮಂಜೂರು ಅಬಕಾರಿ ಚೆಕ್ ಪೋಸ್ಟ್‌ನಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ವಾರೀಸು ದಾರರಿಲ್ಲದ ೧೦ ಕಿಲೋ ಹೊಗೆಸೊಪ್ಪು ಉತ್ಪನ್ನವನ್ನು ಅಧಿಕಾರಿಗಳು ಬಸ್‌ನಿಂದ ವಶಪಡಿಸಿದ್ದಾರೆ. ನಿನ್ನೆ ರಾತ್ರಿ ೯.೩೦ರ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಮಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕರ್ನಾಟಕ ಸಾರಿಗೆ ಸಂ ಸ್ಥೆಯ ಬಸ್‌ನ್ನು ತಪಾಸಣೆ ನಡೆಸಿದಾಗ ಹಿಂಬದಿ ಸೀಟಿನಡಿ ಪ್ಲಾಸ್ಟಿಕ್ ಚೀಲದಲ್ಲಿ ೧೦ ಕಿಲೋ ಹೊಗೆಸೊಪ್ಪು ಉತ್ಪನ್ನ ಕಂಡುಬಂದಿದೆ. ಅಬಕಾರಿ ಇನ್‌ಸ್ಪೆಕ್ಟರ್ ಸಚಿನ್, ಪ್ರಿವೆಂಟಿವ್ ಆಫೀಸರ್ ಮೋಹನನ್, ಸಿಇಒಗಳಾದ ಸಾಜನ್, ಸಜಿತ್, ಬಿಜು ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.

NO COMMENTS

LEAVE A REPLY