ಮುಸೋಡಿಯಲ್ಲಿ ಕಡಲ್ಕೊರೆತ: ಎರಡು ಕುಟುಂಬಗಳ ಸ್ಥಳಾಂತರ; ಹಲವು ಮನೆ ಅಪಾಯದಲ್ಲಿ

0
50

ಉಪ್ಪಳ: ಮಳೆಯ ಆರಂಭ ಹಂತದಲ್ಲೇ ಮುಸೋಡಿ ನಿವಾಸಿಗಳಿಗೆ ನಿದ್ದೆ ಇಲ್ಲದ ರಾತ್ರಿಗಳಾಗಿವೆ. ಕಡಲ್ಕೊರೆತದಿಂದಾಗಿ ಇಲ್ಲಿನ ಹಲವು ಮಂದಿಯ ಮನೆ ಅಪಾಯಭೀತಿಯಲ್ಲಿದೆ. ಈಗಾಗಲೇ ಹಲವು ತೆಂಗಿನ ಮರಗಳು,  ಇತರ ಮರಗಳು ಸಮುದ್ರ ಪಾಲಾಗಿದ್ದು, ನಿನ್ನೆ ಸಂಜೆಯಿಂದ ಕಡಲ್ಕೊರೆತ ತೀವ್ರಗೊಂಡಿದೆ.

ಅಪಾಯಭೀತಿಯಿಂದಾಗಿ ಎರಡು ಕುಟುಂಬಗಳು ಇಲ್ಲಿಂದ ಸ್ಥಳಾಂತರಗೊಂಡಿದೆ. ನೆಫೀಸ, ಮೊಹಮ್ಮದ್‌ರ ಕುಟುಂಬ ಇಲ್ಲಿಂದ ಸ್ಥಳಾಂತರಗೊಂಡಿದೆ. ಅಬ್ಬಾಸ್, ಬೀಫಾತಿಮ್ಮ, ಮೂಸಾ, ಆಸ್ಯುಮ್ಮ, ಮಾಹಿನ್, ಮರಿಯಮ್ಮರ ಮನೆ ಕೂಡಾ ಅಪಾಯಭೀತಿಯಲ್ಲಿದೆ. ಇಸ್ಮಾಯಿಲ್ ಹಾಗೂ ಖೈರುನ್ನೀಸರ ತಲಾ ೨೦೦ ಗಾಳಿ ಮರಗಳು, ಅಹಮ್ಮದ್ ಕುಂಞಿ ಎಂಬವರ ೧೨ರಷ್ಟು ತೆಂಗಿನ ಮರಗಳು ಸಮುದ್ರಪಾಲಾಗಿವೆ. ಈ ಪರಿಸರದ ಒಂದು ಕಿಲೋ ಮೀಟರ್ ದೂರದಲ್ಲಿ ಕಡಲ್ಕೊರೆತವುಂಟಾಗಿದೆ. ಇಲ್ಲಿ ತಡೆಗೋಡೆ ಇಲ್ಲದಿರುವುದೇ ಪದೇ ಪದೇ ಕಡಲ್ಕೊರೆತ ಉಂಟಾಗಲು ಕಾರಣವೆನ್ನಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್, ವಿಲ್ಲೇಜ್ ಆಫೀಸರ್ ಸಹಿತ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ.

NO COMMENTS

LEAVE A REPLY