ಉಪ್ಪಳ: ಮೂಸೋಡಿ, ಶಾರದಾ ನಗರದಲ್ಲಿ ಕಡಲ್ಕೊರೆತ ತೀವ್ರ ಹಲವು ಮನೆಗಳು ಅಪಾಯದಂಚಿನಲ್ಲಿ; ಎರಡು ಕುಟುಂಬಗಳ ಸ್ಥಳಾಂತರ

0
47

 

ಉಪ್ಪಳ: ಮೂಸೋಡಿ ಹಾಗೂ ಪರಿಸರದ ಶಾರದಾ ನಗರದಲ್ಲಿ ಕಡಲ್ಕೊರೆತ ಮುಂದುವರಿಯುತ್ತಿದ್ದು ಹಲವು ಮನೆಗಳು ಅಪಾಯದಂಚಿನಲ್ಲಿವೆ. ಶಾರದಾ ನಗರದ ಮೀನು ಕಾರ್ಮಿಕರಾದ ಶಕುಂತಳಾ ಸಾಲ್ಯಾನ್, ಸುನಂದ, ಶಶಿಕಲ ಎಂಬಿವರ ಮನೆಗಳು ಅಪಾಯದಂಚಿನಲ್ಲಿದ್ದು ಈ ಮನೆಗಳವರೆಗೆ ಸಮುದ್ರ ನೀರು ತಲುಪಿದ್ದು ಅಲೆಗಳು ಗೋಡೆಗೆ ಬಡಿಯುತ್ತಿದೆ. ಈ ಪ್ರದೇಶದಲ್ಲಿದ್ದ ತಡೆಗೋಡೆ ಹಲವು ವರ್ಷಗಳ ಹಿಂದೆಯೇ ಸಮುದ್ರ ಪಾಲಾಗಿದೆ. ಅದೇ ರೀತಿ ಮೂಸೋಡಿಯಲ್ಲಿ ಕಡಲ್ಕೊರೆತದಿಂದ ಇಸ್ಮಾಯಿಲ್ ಎಂಬವರ ಸ್ಥಳದಲ್ಲಿದ್ದ ಗಾಳಿಮರಗಳು ನಿನ್ನೆ ಸಂಜೆ ಸಮುದ್ರ ಪಾಲಾಗಿದೆ. ಇಲ್ಲಿನ ಕಿಳರಿಯ ಮಸೀದಿ ಕೂಡಾ ಅಪಾಯ ಭೀತಿಯಲ್ಲಿದೆ. ಇಲ್ಲಿ ಎಂಟು ಮನೆಗಳು ಕೂಡಾ ಅಪಾಯದಂಚಿನಲ್ಲಿವೆ. ಇಲ್ಲಿನ ಮೊಹಮ್ಮದ್, ನಫೀಸರ ಕುಟುಂಬ ವನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಈ ಪರಿಸರದಲ್ಲಿರುವ ಬ್ರಿಟನ್‌ರ ರಿಸೋರ್ಟ್‌ನ ಆವರಣ ಗೋಡೆ ಪೂರ್ತಿ ಸಮುದ್ರ ಪಾಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಮುಂದು ವರಿಯುತ್ತಿದ್ದಂತೆ ಕಡಲ್ಕೊರೆತ ಇನ್ನಷ್ಟು ತೀವ್ರಗೊಳ್ಳಲಿದೆ ಎಂಬ ಭೀತಿ ಇಲ್ಲಿನ ನಾಗರಿಕರಿಗೆ ಉಂಟಾಗಿದೆ.

NO COMMENTS

LEAVE A REPLY