ಉಗ್ರರೂಪ ಪಡೆದ ‘ವಾಯು’: ರಾಜ್ಯದಾದ್ಯಂತ ತೀವ್ರ ಕಡಲ್ಕೊರೆತ; ಹೈ ಅಲರ್ಟ್ ಮುಂದುವರಿಕೆ

0
70

 

ತಿರುವನಂತಪುರ: ಅರಬಿ ಸಮುದ್ರದಲ್ಲಿ ರೂಪುಗೊಂಡ ‘ವಾಯು’ ಚಂಡಮಾರುತ ಬೆದರಿಕೆ ರಾಜ್ಯದಲ್ಲಿ ಇನ್ನೂ ನೆಲೆಗೊಂಡಿದ್ದು, ಅದು ಈಗ ಇನ್ನಷ್ಟು ತೀವ್ರ ರೂಪ ಪಡೆದುಕೊಂಡಿದ್ದು ಗುಜರಾತ್ ಕರಾವಳಿ ತೀರದತ್ತ ಸಾಗತೊಡಗಿದೆ.

ಈ ಚಂಡಮಾರುತ ನಾಳೆ ಹೊತ್ತಿಗೆ ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಲಿದ್ದು ಅದರಿಂದಾಗಿ ಅದನ್ನು ಎದುರಿಸಲು ಗುಜರಾತ್ ಸರಕಾರ ಅಗತ್ಯದ ಸಿದ್ಧತೆ ನಡೆಸಿದೆ. ಕಚ್ಚ್ ತೀರ ಪ್ರದೇಶದಲ್ಲೇ ಚಂಡಮಾರುತ ಅಪ್ಪಳಿಸಲಿದ್ದು ಆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶದ ಹತ್ತು ಸಾವಿರಕ್ಕೂ ಮಿಕ್ಕಿ ಮಂದಿಯನ್ನು ಅಲ್ಲಿಂದ ಈಗಾಗಲೇ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತ ೬೦ ಲಕ್ಷದಷ್ಟು ಮಂದಿ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಭೀತಿಯನ್ನು ಗುಜರಾತ್ ಸರಕಾರ ವ್ಯಕ್ತಪಡಿಸಿದೆ. ರಕ್ಷಾ ಕಾರ್ಯಾಚರಣೆ ಗಾಗಿ ನೌಕಾಪಡೆ, ಸೇನಾಪಡೆ, ಕರಾವಳಿ ಸಂರಕ್ಷಣಾ ಪಡೆ ಮತ್ತು ವಿಪತ್ತು ನಿರ್ವಹಣಾ ಪಡೆಗಳನ್ನು ಸಿದ್ಧಪಡಿಸಿ ನಿಲ್ಲಿಸಲಾಗಿದೆ. ಅದರಿಂದಾಗಿ  ಕರಾವಳಿ ಪ್ರದೇಶಗಳಿಂದ ಇನ್ನಷ್ಟು ಜನರನ್ನು ಸ್ಥಳಾಂತರಿಸುವ ಕೆಲಸ ಭರದಿಂದ ಸಾಗುತ್ತಿದ್ದು, ತಗ್ಗು ಪ್ರದೇಶಗಳಲ್ಲಿನ ಜನರನ್ನು ಕೂಡಾ ಸುರಕ್ಷಿತ ಪ್ರದೇಶಗಳಿಗೆ ಸಾಗಿಸಲಾಗು ತ್ತಿದೆ.  ಗುಜರಾತ್‌ನ ಕಚ್ಚ್ ಮಾತ್ರವಲ್ಲ, ದ್ವಾರಕ, ಪೋರ್‌ಬಂದರ್ ಜನ್‌ಗಡ್, ದಿಯೂ, ಗಿರ್-ಸೋಮನಾಥ್, ಅಮೆರ್ಲಿ, ಭಾವ್‌ನಗರ ಜಿಲ್ಲೆಗಳ  ಕರಾವಳಿ ಪ್ರದೇಶ ಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು ತೀವ್ರ ಕಟ್ಟೆಚ್ಚರ ಪಾಲಿಸಲಾಗುತ್ತಿದೆ. ವಾಯು ಚಂಡಮಾರುತದ ೧೩೫ ರಿಂದ ೧೪೦ ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಎಂದು ಲೆಕ್ಕ ಹಾಕಲಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಗುಜರಾತ್‌ನ ಹಲವು ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ.

ವಾಯು ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಸರಗೋಡು ಸೇರಿದಂತೆ ಒಟ್ಟು ಒಂಭತ್ತು ಜಿಲ್ಲೆಗಳಲ್ಲಿ ಘೋಷಿಸಲಾದ ರೆಡ್ ಅಲರ್ಟ್ ಇನ್ನೂ ಮುಂದುವ ರಿಸಲಾಗಿದೆ. ಉತ್ತರ ಕೇರಳದ ಹಲವು ಜಿಲ್ಲೆಗಳಲ್ಲಿ ೧೨ ಸೆ.ಮೀ ಗಿಂತ ಲೂ ಹೆಚ್ಚು ಭಾರೀ ಮಳೆ ಉಂಟಾ ಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾಯು ಚಂಡಮಾರುತ ಹಿನ್ನೆಲೆ ಯಲ್ಲಿ ರಾಜ್ಯದ ಎಲ್ಲಾ ಸಮುದ್ರ ತೀರಗಳಲ್ಲಿ ತೀವ್ರ ಕಡಲ್ಕೊರೆತವೂ ಉಂಟಾಗಿದ್ದು ಅದು ವ್ಯಾಪಕ ನಾಶನಷ್ಟ ಸೃಷ್ಟಿಸತೊಡಗಿದೆ.

NO COMMENTS

LEAVE A REPLY