ಫೋಕ್ಸೋ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಡಿವೈಎಸ್ಪಿ ನೇತೃತ್ವದಲ್ಲಿ ಅಬುದಾಬಿಯಿಂದ ಸೆರೆ

0
31

 

ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯಾಗಿಸಿ ಬಳಿಕ ಗರ್ಭಪಾತ ನಡೆಸಿದ  ಬಳಿಕ ಗಲ್ಫ್‌ಗೆ ಪರಾರಿಯಾಗಿದ್ದ ಆರೋಪಿ ಯನ್ನು ಇಂಟರ್ ಪೋಲ್ ಸಹಾಯದಿಂದ ಕಾಸರಗೋಡು ಎಸ್.ಎಂ.ಎಸ್ ಡಿವೈಎಸ್ಪಿ ಹರಿಶ್ಚಂದ್ರ ನಾಯ್ಕ ನೇತೃತ್ವದ ತಂಡ  ಅಬುದಾಬಿಯಿಂದ ಬಂಧಿಸಿ ಕಾಸರ ಗೋಡಿಗೆ ತಂದಿದ್ದಾರೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಮಯ್ಯಿಚ ಎಂಬಲ್ಲಿ ಮಂಡ್ಯೆಪುರೆ ಯಿಲ್ ಶ್ರೀರಾಜ್ (೨೨) ಬಂಧಿತ ಆರೋಪಿಯಾಗಿದ್ದಾನೆ.

ವರ್ಕ್‌ಶಾಪ್‌ವೊಂದರಲ್ಲಿ ಈ ಹಿಂದೆ ಕಾರ್ಮಿಕನಾಗಿ ದುಡಿಯು ತ್ತಿದ್ದ ಆರೋಪಿ ಶ್ರೀರಾಜ್ ೨೦೧೬ರಲ್ಲಿ ಚಂದೇರಾ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪರಿಶಿಷ್ಟ ಜಾತಿಗೆ ಸೇರಿದ ಹತ್ತನೇ ತರಗತಿ ವಿದ್ಯಾರ್ಥಿನಿ ಯನ್ನು ಪ್ರೀತಿಸತೊಡಗಿ ಬಳಿಕ ಆಕೆಗೆ ಲೈಂಗಿಕ  ಕಿರುಕುಳ ನೀಡಿದ್ದನು. ಅದರಿಂದ ಗರ್ಭ ಧರಿಸಿದ ಆಕೆಯನ್ನು ಆರೋಪಿ ಆಸ್ಪತ್ರೆಗೆ ಸಾಗಿಸಿ ಗರ್ಭಪಾತ ನಡೆಸಿದ್ದನೆಂದು ದೂರಲಾಗಿದೆ. ಇದರಂತೆ ೨೦೧೭ ಫೆಬ್ರವರಿ ೧೫ರಂದು ಚಂದೇರ ಪೊಲೀಸರು ಶ್ರೀರಾಜ್‌ನ ವಿರುದ್ಧ ಫೋಕ್ಸೋ ಕಾನೂನುಪ್ರಕಾರ ಕೇಸು ದಾಖಲಿಸಿಕೊಂಡಿದ್ದರು. ಕೇಸಿನ ವಿಷಯವನ್ನು ತಿಳಿದ ಆರೋಪಿ ಶ್ರೀರಾಜ್ ಬಳಿಕ ಅಬುದಾಬಿಗೆ ತೆರಳಿ ಅಲ್ಲಿ ತಲೆಮೆರೆಸಿಕೊಂಡಿದ್ದನು. ಬಳಿಕ ಪ್ರಸ್ತುತ ಪ್ರಕರಣದ ತನಿಖೆಯನ್ನು ಎಸ್‌ಎಂಎಸ್ ಡಿವೈಎಸ್ಪಿ ಹರಿಶ್ಚಂದ್ರ ನಾಯ್ಕರಿಗೆ ಹಸ್ತಾಂತರಿಸಲಾಗಿತ್ತು. ಅಬುದಾಬಿಗೆ ಪಲಾಯನಗೈದ ಶ್ರೀರಾಜ್‌ನನ್ನು ಬಂಧನಕ್ಕಾಗಿ ಇಂಟರ್‌ಪೋಲ್‌ನ ಸಹಾಯ ಯಾಚಿಸಿ ಪೊಲೀಸರು ರೆಡ್ ಕಾರ್ನರ್ ನೋಟೀಸು ಜ್ಯಾರಿಗೊಳಿಸಿದ್ದರು. ಅದರಂತೆ ಇಂಟರ್ ಪೋಲ್ ಶ್ರೀರಾಜ್‌ನನ್ನು ಅಬುದಾಬಿಯಿಂದ ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿತ್ತು. ಅದರಂತೆ ಎಸ್‌ಎಂಎಸ್ ಡಿವೈಎಸ್ಪಿ ಹರಿಶ್ಚಂದ್ರ ನಾಯ್ಕ ಮತ್ತು ಸಿವಿಲ್ ಪೊಲೀಸ್ ಆಫೀಸರ್ ಬಿಜೇಶ್ ಅಬುದಾಬಿಗೆ ಸಾಗಿ ಶ್ರೀರಾಜ್‌ನನ್ನು ಅಲ್ಲಿಂದ ದಸ್ತಗಿರಿಗೈದು ನಿನ್ನೆ ರಾತ್ರಿ ಕಾಸರಗೋಡಿಗೆ ಕರೆತಂದಿದ್ದಾರೆ. ಆರೋಪಿಯನ್ನು ಸಮಗ್ರ ವಿಚಾರಣೆಗೊಳಪಡಿಸಿದ ಬಳಿಕ ಆತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY