ಬೈಕ್ ಢಿಕ್ಕಿ ಹೊಡೆದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು

0
25

 

ಉಪ್ಪಳ: ಬೈಕ್ ಢಿಕ್ಕಿ ಹೊಡೆದು ಗಂಭೀರಾವಸ್ಥೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮಣ್ಣಂಗುಳಿ ನಡುವಳಪ್ಪು ಹೌಸ್‌ನ ಅಬ್ದುಲ್ ರಹಿಮಾನ್ (೬೨) ಮೃತಪಟ್ಟಿದ್ದಾರೆ. ನಿನ್ನೆ ಬೆಳಿಗ್ಗೆ ೮.೩೦ರ ವೇಳೆ ಪುತ್ರಿ ಅಸ್ರೀನ (೧೮)ಳನ್ನು ಕಾಲೇಜಿಗೆ ಬಿಡಲು ಕೈಕಂಬಕ್ಕೆ ಇವರಿಬ್ಬರು ನಡೆದುಹೋಗುತ್ತಿದ್ದಾಗ ಮಣ್ಣಂಗುಳಿ ಮದ್ರಸ ಬಳಿಯಲ್ಲಿ ಹಿಂಬದಿಯಿಂದ ಅಪರಿಮಿತ ವೇಗದಲ್ಲಿ ಬಂದ ಬೈಕ್ ಢಿಕ್ಕಿಹೊಡೆದಿದೆ. ಇದರಿಂದ ಅಬ್ದುಲ್ ರಹಿಮಾನ್ ರಸ್ತೆಗೆ ಬಿದ್ದು ಗಂಭೀರಾವಸ್ಥೆಯಲ್ಲಿದ್ದ ಇವರನ್ನು ಕೂಡಲೇ ಸ್ಥಳೀಯರು ಉಪ್ಪಳ ಆಸ್ಪತ್ರೆಗೆ ಸಾಗಿಸಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ೧ ಗಂಟೆಗೆ ಮೃತಪಟ್ಟರು. ಅಪಘಾತದಲ್ಲಿ ಪುತ್ರಿ ಅಸ್ರೀನ ಕೂಡಾ ಗಾಯಗೊಂ ಡಿದ್ದರು.  ಮೃತರು ಪತ್ನಿ ಖದೀಜ, ಓರ್ವೆ ಪುತ್ರಿ, ಸಹೋದರರಾದ ಅಬೂಬಕ್ಕರ್ ವಡಗರ, ಅಬ್ದುಲ್ಲ, ಸಹೋದರಿ ಬೀಫಾತಿಮ್ಮ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಪಘಾತಕ್ಕೆ ಸಂಬಂಧಿಸಿ ಬೈಕ್ ಸವಾರನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY