ಕರ್ಮಂತೋಡಿಯಲ್ಲಿ ರಸ್ತೆಗೆ ಬಿದ್ದ ಅಕೇಶಿಯ: ಒಂದೂವರೆ ಗಂಟೆ ಸಾರಿಗೆ ಅಡಚಣೆ

0
26

 

ಮುಳ್ಳೇರಿಯ: ರಸ್ತೆ ಬದಿಯ ಅಕೇಶಿಯ ಮರ ಬಿದ್ದು ಒಂದೂವರೆ ಗಂಟೆಗಳ ಕಾಲ ರಸ್ತೆ ತಡೆ ಸೃಷ್ಟಿಯಾದ ಘಟನೆ ಕರ್ಮಂತೋಡಿಯಲ್ಲಿ ನಡೆದಿದೆ. ಇಂದು ಮುಂಜಾನೆ ಮರಬಿದ್ದು  ವಿದ್ಯುತ್ ತಂತಿ ತುಂಡಾಗಿದೆ. ಕೂಡಲೇ ವಿದ್ಯುತ್ ವಿಚ್ಛೇದಿಸಲ್ಪಟ್ಟ ಕಾರಣ ಅಪಾಯತಪ್ಪಿದೆ. ಇದರಿಂದ ಈ ಪ್ರದೇಶದಲ್ಲಿ ಬೆಳಿಗ್ಗೆ ವಿದ್ಯುತ್ ವಿತರಣೆ ಮೊಟಕುಗೊಂಡಿದೆ.

ರಸ್ತೆಗಡ್ಡವಾಗಿ ಬಿದ್ದ ಮರದಿಂದಾಗಿ ಚೆರ್ಕಳ-ಜಾಲ್ಸೂರು ರಸ್ತೆಯಲ್ಲಿ ವಾಹನಸಾಗಲು ತಡೆಯಾಯಿತು. ಅಗತ್ಯವಾಹನಗಳು ಕರ್ಮಂತೋಡಿ-ಕಾರಡ್ಕ-ನೆಲ್ಲಿಕಟ್ಟೆ ರಸ್ತೆಯಲ್ಲಿ  ಸಂಚರಿಸಿವೆ. ಕಾಸರಗೋಡಿನಿಂದ ಅಗ್ನಿಶಾಮಕದಳ, ವಿದ್ಯುತ್ ಇಲಾಖೆ ಅಧಿಕಾರಿಗಳು, ಆದೂರು ಪೊಲೀಸರು, ಸ್ಥಳೀಯರು ಸೇರಿ ಮರ ಕಡಿದು ತೆರವುಗೊಳಿಸಿ ಸಂಚಾರ ಸುಗಮ ಗೊಳಿಸಲಾಯಿತು.

NO COMMENTS

LEAVE A REPLY