ಬೆಂಕಿ: ಕುಂಬಳೆಯಲ್ಲಿ ಲಕ್ಷಾಂತರ ರೂ.ಗಳ ಕೇಬಲ್ ನಾಶ

0
46

ಕುಂಬಳೆ: ಇಲ್ಲಿನ ರೈಲು ನಿಲ್ದಾಣ ಪರಿಸರದಲ್ಲಿ ಭಾರೀ ಬೆಂಕಿ ಆಕಸ್ಮಿಕ ಸಂಭವಿಸಿದೆ. ಲಕ್ಷಾಂತರ ರೂ.ಗಳ ಕೇಬಲ್ ಉರಿದು ಭಸ್ಮವಾಗಿದೆ. ರೈಲು ನಿಲ್ದಾಣ ಪರಿಸರದಲ್ಲಿ ನಿಲುಗಡೆಗೊಳಿಸಿದ್ದ ಹಲವಾರು ವಾಹನಗಳಿಗೆ ಬೆಂಕಿ ಆವರಿಸುವುದು ಸ್ಥಳೀಯರ ಸಂದರ್ಭೋಚಿತ ಕಾರ್ಯಾ ಚರಣೆಯಿಂದ ತಪ್ಪಿಹೋಯಿತು.

ನಿನ್ನೆ ಮಧ್ಯಾಹ್ನ ಕುಂಬಳೆ ರೈಲು ನಿಲ್ದಾಣ ಪರಿಸರದಲ್ಲಿರುವ ಹುಲ್ಲು ಕಾಡಿಗೆ ಬೆಂಕಿ ತಗಲಿದ್ದು ಅದು ವಿವಿಧೆಡೆಗಳಿಗೆ ಹರಡಿದೆ. ರೈಲ್ವೇ ಲೈನ್ ವಿದ್ಯುತ್ತೀಕರಣಗೊಳಿಸುವು ದಕ್ಕಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ.ಗಳ ಕೇಬಲ್ ಇದರಿಂದ ನಾಶಗೊಂಡಿದೆ. ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಸೇರಿ ಗಂಟೆಗಳ ಕಾಲ ನಡೆಸಿದ ಪ್ರಯತ್ನದ ಫಲವಾಗಿ ಬೆಂಕಿ ನಂದಿಸಲಾಯಿತು.  ರೈಲು ನಿಲ್ದಾಣ ಪರಿಸರ ದಲ್ಲಿ ಪ್ರಯಾಣಿಕರ ಸಹಿತ ಹಲವಾರು ವಾಹನಗಳನ್ನು ನಿಲುಗಡೆಗೊಳಿಸಲಾಗಿತ್ತು. ಬೆಂಕಿ ಈ  ಭಾಗಕ್ಕೆ ಹರಡಲಾರಂಭಿಸಿದಾಗ ಜನರು ಭೀತಿಗೊಂಡರು. ಈ ಮಧ್ಯೆ ತಂಡವೊಂದು ಅಲ್ಲಿಗೆ ತಲುಪಿ ದ್ವಿಚಕ್ರ ವಾಹನ ಸಹಿತ ಅಲ್ಲಿದ್ದ ವಾಹನಗಳನ್ನು ಇತರೆಡೆಗೆ ಸ್ಥಳಾಂತರಿಸಿದರು.  ಸಮೀಪದ ಟಯರ್ ವರ್ಕ್ಸ್ ಮಾಲಕ ಕೃಷ್ಣನ್, ಇಲೆಕ್ಟ್ರೀಷಿಯನ್ ಮುನ್ನಾ, ಆಟೋ ಚಾಲಕ ಖಾಲಿದ್, ಇನ್ನೋರ್ವಚಾಲಕ ಆನಂದ್ ಮೊದಲಾದವರ ನೇತೃತ್ವದಲ್ಲಿ ವಾಹನಗಳನ್ನು ಸ್ಥಳಾಂತರಿಸಲಾಯಿತು. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ. ಇದೇ ವೇಳೆ ಹುಲ್ಲಿಗೆ ಯಾರೋ ಬೆಂಕಿ ಹಚ್ಚಿರುವುದಾಗಿ ಸ್ಥಳೀಯರು ಶಂಕಿಸಿದ್ದಾರೆ.  ಕುಂಬಳೆ ಹಾಗೂ ಪರಿಸರ ಪ್ರದೇಶದಲ್ಲಿ ಹುಲ್ಲಿಗೆ  ಕಿಚ್ಚಿರಿಸುವುದು ವ್ಯಾಪಕ ವಾಗಿದೆಯೆಂದು ಸ್ಥಳೀಯರು ದೂರಿದ್ದಾರೆ.

ಕಾಸರಗೋಡು: ಕಾಸರಗೋಡು ಮತ್ತು ಪರಿಸರದ ಹಲವೆಡೆಗಳಲ್ಲಿ ಹಿತ್ತಿಲಿಗೆ ಬೆಂಕಿ ತಗಲಿ ಕಾಸರಗೋಡು ಅಗ್ನಿಶಾಮಕ ದಳದವರು  ಅಲ್ಲಿಗೆ ಪ್ರದೇಶಗಳಿಗೂ ತೆರಳಿ ಬೆಂಕಿ ನಂದಿಸಿದೆ. ಎರಿಯಾಲ್‌ನಲ್ಲಿ ರಸ್ತೆ ಬದಿಯಲ್ಲಿ ರಾಶಿ ಹಾಕಲಾಗಿದ್ದ ಕಟ್ಟಿಗೆ ರಾಶಿಗೆ ಇಂದು ಮುಂಜಾನೆ ಬೆಂಕಿ ತಗಲಿಕೊಂಡು, ಅದು ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸುತ್ತಿರುವಂತೆಯೇ ಅಗ್ನಿಶಾಮಕದಳದವರು ಆಗಮಿಸಿ  ನಂದಿಸಿದ್ದಾರೆ. ಕಾಸರಗೋಡು ರೈಲು ನಿಲ್ದಾಣ ಬಳಿಯ ಹಿತ್ತಿಲು,  ಬೋವಿಕ್ಕಾನ ಮಾಸ್ತಿಕುಂಡುವಿನ ರಸ್ತೆ ಬಳಿ ಮತ್ತು ಚಟ್ಟಂಚಾಲ್ ರಸ್ತೆ ಬಳಿಯಲ್ಲಿ ನಿನ್ನೆ ಹುಲ್ಲುಗಳಿಗೆ ಬೆಂಕಿ ತಗಲಿದ್ದು ಅಗ್ನಿಶಾಮಕದಳ ನಂದಿಸಿದೆ.

NO COMMENTS

LEAVE A REPLY