ಅಲ್ತಾಫ್ ಕೊಲೆ ಪ್ರಕರಣ: ಆರೋಪಿಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಮಾಹಿತಿ ಸಂಗ್ರಹ

0
28

 

ಕಾಸರಗೋಡು: ಉಪ್ಪಳ ಪ್ರತಾಪ ನಗರದ ಪುಳಿಕುತ್ತಿಯ ಅಲ್ತಾಫ್ (೪೭) ಕೊಲೆ ಪ್ರಕರಣದ ಆರೋಪಿ ಉಪ್ಪಳ ಕುಕ್ಕಾರ್ ಹಿದಾಯತ್ ನಗರದ ಮಂಗಲ್ಪಾಡಿ ಶಾಲೆ ಹಿಂದುಗಡೆಯಿರುವ ಮುಬಾರಕ್ ಮಂಜಿಲ್ ನಿವಾಸಿ ಹಾಗೂ ಈಗ ಮಂಗಳೂರಿನ ದೇರಳಕಟ್ಟೆಯ ಬಬ್ಬುಕಟ್ಟೆಯಲ್ಲಿ ವಾಸಿಸುತ್ತಿರುವ ಮೊಯ್ದೀನ್ ಶಬೀರ್ ಯಾನೆ ಶಬೀರ್ ಯಾನೆ ಶಬ್ಬಿ (೩೩)ನನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ರಾಜೀವನ್ ವಲಿಯಪರಂಬಿಲ್ ನೇತೃತ್ವದಲ್ಲಿ ಕೊಲೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕಲು ವಿವಿಧ ಸ್ಥಳಗಳಿಗೆ ಸಾಗಿಸಿ ಅಗತ್ಯದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಪೊಲೀಸರು ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಆರೋಪಿ ಶಬೀರ್‌ನನ್ನು  ಕಾಸರ ಗೋಡು ಸಬ್ ಜೈಲ್‌ನಿಂದ   ಕಾಸರ ಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೨)ದಲ್ಲಿ ನಿನ್ನೆ ಹಾಜರುಪಡಿಸಲಾಗಿದ್ದು,  ಬಳಿಕ  ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನದಿಂದ ನಿನ್ನೆಯಿಂದ ಎಂಟು ದಿನಗಳ ತನಕ ಕುಂಬಳೆ ಇನ್‌ಸ್ಪೆ ಕ್ಟರ್‌ರ ಕಸ್ಟಡಿಗೆ ನೀಡಿದೆ. ಅಲ್ತಾಫ್‌ರನ್ನು ಅಪಹರಿಸಿದ ಸ್ಥಳ, ಕಾರಿನಲ್ಲಿ  ಸಾಗಿಸಿ ಹಲ್ಲೆ ನಡೆಸಿ   ಕೈಯ ನರ ಕತ್ತರಿಸಿದ ಸ್ಥಳ ಮತ್ತು ಉಪೇಕ್ಷಿಸಿದ ಸ್ಥಳ, ಕೊಲೆಗೆ ಬಳಸಿದ ಆಯುಧ ಇತ್ಯಾದಿಗಳ ತನಿಖೆಗಾಗಿ ಆರೋಪಿಯನ್ನು ಸಂಬಂಧಪಟ್ಟ ಹೆಚ್ಚಿನ ಎಲ್ಲಾ ಪ್ರದೇಶಗಳಿಗೆ ಸಾಗಿಸಿ ಮಾಹಿತಿ ಮತ್ತು ಪುರಾವೆ ಸಂಗ್ರಹದಲ್ಲಿ ಪೊಲೀಸರು ತೊಡಗಿದ್ದಾರೆ.

ಕಾಸರಗೋಡು ಸಬ್ ಜೈಲ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಬೀರ್‌ನನ್ನು ಅಲ್ಲೇ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್  ನ್ಯಾಯಾಲಯ (೧)ದ ಮೆಜಿಸ್ಟ್ರೇಟ್ ಸಾನಿದ್ಯದಲ್ಲಿ ಸಾಕ್ಷಿದಾರನಿಂದ ಜೂನ್ ೬ರಂದು ಗುರುತುಹಚ್ಚುವ ಪರೇಡ್‌ಗೂ ಒಳಪಡಿಸಲಾಗಿತ್ತು. ಅದರಲ್ಲಿ ಸಾಕ್ಷಿದಾರ ಆರೋಪಿಯ ಗುರುತುಹಚ್ಚಿದ್ದರು. ಆ ಬಳಿಕ ಈ ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆತನನ್ನು ನ್ಯಾಯಾಂಗ ಬಂಧನದಿಂದ ತಮ್ಮ ಕಸ್ಟಡಿಗೆ ಬಿಟ್ಟುಕೊಡಬೇಕೆಂದು ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಆತನನ್ನು ನಿನ್ನೆ ನ್ಯಾಯಾಲಯ ಎಂಟು ದಿನಗಳ ತನಕ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಟ್ಟಿದೆ.

NO COMMENTS

LEAVE A REPLY