ಅಡೂರು, ಬಂದಡ್ಕದಲ್ಲಿ ಮತ್ತೆ ಕಾಡಾನೆ ಆಕ್ರಮಣ: ವ್ಯಾಪಕ ಕೃಷಿನಾಶ

0
28

 

ಅಡೂರು: ಅಡೂರು ಹಾಗೂ ಪಾಂಡಿ ಬಳಿಯ ಕೃಷಿ ಸ್ಥಳಗಳಿಗೆ ಕಾಡಾನೆಗಳು ಮತ್ತೆ ದಾಳಿ ನಡೆಸಿದ ಪರಿಣಾಮ ವ್ಯಾಪಕ ಕೃಷಿನಾಶವುಂಟಾಗಿದೆ.

ಅಡೂರು ಬಳ್ಳಕಾನದ ಭಾಸ್ಕರ, ಬಂದಡ್ಕ ಮಾಣಿಮೂಲೆ ಕಣ್ಣಾಡಿ ತೋಡ್‌ನ ಚಕ್ರಪಾಣಿ ಎಂಬಿವರ ಕಂಗಿನ ತೋಟಕ್ಕೆ ಕಾಡಾನೆಗಳು ತಲುಪಿವೆ. ಬಳ್ಳಕಾನದಲ್ಲಿ ಐದು, ಮಾಣಿಮೂಲೆಯಲ್ಲಿ ಮೂರು ಕಾಡಾನೆಗಳು ದಾಳಿ ನಡೆಸಿದ್ದು ವ್ಯಾಪಕ ಕೃಷಿನಾಶವುಂಟಾಗಿದೆ. ಮೊನ್ನೆ ಸಂಜೆ ತಲುಪಿದ ಆನೆಗಳು ತೋಟವಿಡೀ ಸುತ್ತಾಡಿದ್ದು, ಅರಣ್ಯಾ ಧಿಕಾರಿಗಳು ತಲುಪಿ ನಾಗರಿಕರ ಸಹಾಯದಿಂದ ನಿನ್ನೆ ಸಂಜೆ ವೇಳೆ ಆನೆಗಳನ್ನು ಓಡಿಸಲಾಯಿತು. ಕರ್ನಾಟಕದ ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿ ಈ ಕೃಷಿ ಪ್ರದೇಶಗಳಿವೆ. ಈ ಭಾಗಕ್ಕೆ ಪದೇ ಪದೇ ಆನೆಗಳು ದಾಳಿ ನಡೆಸುತ್ತಿದ್ದು ಈ ಹಿಂ ದೆಯೂ ವ್ಯಾಪಕ ಕೃಷಿನಾಶವುಂಟಾಗಿತ್ತು.

ಮಳೆಗಾಲ ಆರಂಭಗೊಂಡ ಬಳಿಕ ಕಾಡು ಮೃಗಗಳ ಹಾವಳಿ ವ್ಯಾಪಕಗೊಂಡಿದ್ದು ಇದರಿಂದ ಕೃಷಿಕರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ.

NO COMMENTS

LEAVE A REPLY