ಉಸಿರಾಟ ತೊಂದರೆ: ಮಧ್ಯ ವಯಸ್ಕ ಮೃತ್ಯು

0
31

 

ಪೆರ್ಲ: ಉಸಿರಾಟ ತೊಂದರೆಯಿಂದ ಮಧ್ಯವಯಸ್ಕ ಮೃತಪಟ್ಟರು.ಶೇಣಿ ಮಂಜಾರೆ ಕೊಡಿಪ್ಪಾಡಿ ನಿವಾಸಿ ಕೃಷ್ಣ (೫೫) ಎಂಬವರು ಮೃತಪಟ್ಟ ವ್ಯಕ್ತಿ. ಕೂಲಿ ಕಾರ್ಮಿಕನಾದ ಇವರಿಗೆ ಎರಡು ದಿನಗಳಿಂದ ಉಸಿರಾಟ ತೊಂದರೆ ಕಾಣಿಸಿ ಕೊಂಡಿತ್ತು. ಪೆರ್ಲದ ಆಸ್ಪತ್ರೆಯಿಂದ ಔಷಧಿ ಪಡೆದಿದ್ದರೆನ್ನ ಲಾಗುತ್ತಿದೆ. ನಿನ್ನೆ ಮಧ್ಯಾಹ್ನ ವೇಳೆ ಮತ್ತೆ ಅಸೌಖ್ಯ ಕಾಣಿಸಿಕೊಂಡಿತ್ತು. ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಮೃತರು ಪತ್ನಿ ಚಂದ್ರಾವತಿ, ಮಕ್ಕಳಾದ ಲೋಕೇಶ್, ಪುರುಷೋ ತ್ತಮ, ಪುನೀತ್, ಜಯರಾಮ, ಶ್ರವಣ್, ಸಹೋದರ- ಸಹೋದರಿ ಯರಾದ ಶಂಕರ, ರಾಮ, ಕುಕ್ಕೆದಿ, ಚೋಮು, ಸುಂದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY