ಅಲ್ತಾಫ್ ಹತ್ಯೆ: ಇನ್ನೋರ್ವ ಆರೋಪಿ ಬಲೆಯಲ್ಲಿ; ಶೀಘ್ರ ಬಂಧನ ಸಾಧ್ಯತೆ

0
43

 

ಕುಂಬಳೆ: ಪತ್ನಿಯ ತಂದೆಯ ನ್ನೇ ಅಪಹರಿಸಿ ಕೊಲೆಗೈದ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಪೊಲೀಸ್ ಬಲೆ ಯಲ್ಲಿದ್ದಾನೆ. ಈತನನ್ನು ಶೀಘ್ರ ಬಂಧಿಸುವ ದಾಗಿ ಕುಂಬಳೆ ಸಿ.ಐ ರಾಜೀವನ್ ವಲಿಯ ವಳಪ್ಪಿಲ್ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಪ್ರಕರಣದಲ್ಲಿ ಒಂದನೇ ಆರೋ ಪಿಯೂ ಕೊಲೆಗೀಡಾದ ಅಲ್ತಾಫ್‌ರ ಮಗಳ ಪತಿಯಾದ ಶಬೀರ್ ಕರ್ನಾಟಕದ ನ್ಯಾಯಾಲಯದಲ್ಲಿ ಶರಣಾಗಿದ್ದನು. ಎಂಟು ದಿನಗಳಿಗೆ ಈತನನ್ನು ನ್ಯಾಯಾಲಯ ಕುಂಬಳೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಟ್ಟಿದೆ. ಇದೇ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಯಾದ ರುಮೈಸ್‌ನನ್ನು ಈ ಹಿಂದೆಯೇ ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದರು. ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY