ಶಾಸಕರ ರಾಜೀನಾಮೆ ನಾಟಕ: ವಿಶೇಷ ಸಚಿವ ಸಂಪುಟ ಸಭೆ ಆರಂಭ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ಸಾಧ್ಯತೆ

0
29

 

ಬೆಂಗಳೂರು: ಮೈತ್ರಿ ಸರಕಾರದ ೧೬ ಶಾಸಕರ ದಿಢೀರ್ ರಾಜೀನಾಮೆಯಿಂದ ತಲೆಯೆತ್ತಿರುವ ಅನಿಶ್ಚಿತತೆಯಿಂದಾಗಿ ಸರಕಾರವನ್ನು ಉಳಿಸುವುದು ಅಸಾಧ್ಯವೆಂಬುವು ದನ್ನು ಮನಗಂಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ಮಹತ್ವದ ಸಚಿವ ಸಂಪುಟ ಸಭೆ ಆರಂಭಗೊಂಡಿದ್ದು ಅದರಲ್ಲಿ ಸಮಗ್ರವಾಗಿ ಚರ್ಚಿಸಿ ರಾಜೀನಾಮೆ ಸಂಬಂಧಿಸಿದ ನಿರ್ಧಾರವನ್ನು ಕುಮಾರಸ್ವಾಮಿ ಪ್ರಕಟಿಸುವರೆಂದು ಹೇಳಲಾಗುತ್ತಿದೆ. ನಾಳೆ ವಿಧಾನಸಭೆ ಯ ಮುಂಗಾರು ಅಧಿವೇಶನವೂ ಆರಂಭಗೊಳ್ಳಲಿದ್ದು, ಅಧಿವೇಶನದ ಮೊದಲ ದಿನವೇ ಮುಖ್ಯಮಂತ್ರಿ ಕುಮಾರ ಸ್ವಾಮಿ ವಿದಾಯ ಭಾಷಣ ಮಾಡಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಹಾಗೆ ನಡೆದಲ್ಲಿ ರಾಜ್ಯ ಸರಕಾರದಲ್ಲಿ ನಡೆಯು ತ್ತಿರುವ ಶಾಸಕರ ರಾಜೀನಾಮೆಯ ನಾಟಕಕ್ಕೆ  ಖಾಯಂ ಆಗಿ ತೆರೆ ಬೀಳುವ ಸಾಧ್ಯತೆಯೂ ಇದೆ. ಇದೇ ವೇಳೆ ಮೈತ್ರಿ ಸರಕಾರ ಪತನವಾಗಿ, ಬಿಜೆಪಿ ಬಹುಮತ ಸಾಬೀತುಪಡಿಸಿ ಹೊಸ ಸರಕಾರ ರಚಿಸಲಿದೆಯೇ ಅಥವಾ ಚುನಾವಣೆಯ ಕದ ತಟ್ಟಲಿದೆಯೇ ಎನ್ನುವ ಕುತೂಹಲ ಜನರಲ್ಲಿ ಮೂಡಿದೆ.

ಸಚಿವ ಸಂಪುಟ ಆರಂಭಗೊಳ್ಳು ವ ಮೊದಲು ಮುಖ್ಯಮಂತ್ರಿ ಕುಮಾರ ಸ್ವಾಮಿ ಇಂದು ಬೆಳಿಗ್ಗೆ ಕೆ.ಕೆ. ಅತಿಥಿ ಗೃಹಕ್ಕೆ ಆಗಮಿಸಿ ಕಾಂಗ್ರೆಸ್‌ನ ಉನ್ನತ ನೇತಾರರೊಂದಿಗೆ ಅಂತಿಮ ಸುತ್ತಿನ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮ ಯ್ಯ, ಕಾಂಗ್ರೆಸ್ ನೇತಾರರಾದ ಗುಲಾಂನಬೀ ಆಜಾದ್, ಕಾಂಗ್ರೆಸ್‌ನ ಕರ್ನಾಟಕ ಹೊಣೆಗಾರಿಕೆ ಹೊಂದಿರು ವ ಕೆ.ಕೆ. ವೇಣುಗೋಪಾಲ್‌ರವರೂ ಚರ್ಚೆಯಲ್ಲಿ ಪಾಲ್ಗೊಂಡರು. ಸರಕಾರಕ್ಕೆ ಬಹುಮತ ನಷ್ಟಗೊಂಡಿದೆ ಎಂದು ಸಿದ್ಧರಾಮಯ್ಯನವರು ನಿನ್ನೆಯೇ ತಿಳಿಸಿದ್ದರು. ಕಾಂಗ್ರೆಸ್‌ನ ನಿರೀಕ್ಷೆಗಳೆಲ್ಲವೂ ವಿಫಲಗೊಂಡಿದೆ ಎಂಬುವುದನ್ನು ಅದು ಸೂಚಿಸಿತ್ತು. ಕೊನೆಯ ಹಂತದಲ್ಲಿ ಇಂದು ಚರ್ಚೆಗಳ ಮಹಾಸರಣಿಗಳೇ ನಡೆಯುತ್ತಿದೆ. ಕರ್ನಾಟಕದಲ್ಲಿ ರಾಜಕೀಯ ಪ್ರಕ್ಷುಬ್ದ ಸ್ಥಿತಿ ತಲೆಯೆತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌದ ಮತ್ತು ಪರಿಸರ ಪ್ರದೇಶಗಳಲ್ಲಿ ಇಂದಿನಿಂದ ಸೆಕ್ಷನ್ ೧೪೪ರನ್ವಯ ನಿಷೇಧಾಜ್ಞೆಯನ್ನು ಜ್ಯಾರಿಗೊಳಿಸಲಾಗಿದೆ.

NO COMMENTS

LEAVE A REPLY