೧೪ ವರ್ಷ ಹಿಂದೆ ನಡೆದ ಪೈವಳಿಕೆ ಖಲೀಲ್ ಕೊಲೆ ಪ್ರಕರಣ: ಅಡಿಶನಲ್ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್ ತೀರ್ಪು

0
46

ಕೊಚ್ಚಿ: ಭಾರೀ ಕೋಲಾಹಲಕ್ಕೆ ಕಾರಣವಾದ ಪೈವಳಿಕೆಯ ಖಲೀಲ್ ಕೊಲೆ ಪ್ರಕರಣದಲ್ಲಿ ಕಾಸರಗೋಡು ಜಿಲ್ಲಾ ಅಡಿಶನಲ್ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದ ಆರೋಪಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜತೆಗೆ ೫೦,೦೦೦ ರೂಪಾಯಿ ದಂಡವನ್ನು ವಿಧಿಸಲಾಗಿದೆ. ದಂಡ ಪಾವತಿಸದಿ ದ್ದಲ್ಲಿ ಮೂರು ತಿಂಗಳು ಕಠಿಣ ಸಜೆ ಅನುಭವಿಸಬೇಕಾಗಿದೆಯೆಂದು ತಿಳಿಸಲಾಗಿದೆ.

ಮುಸ್ಲಿಂ ಲೀಗ್ ಕಾರ್ಯಕರ್ತ ನಾದ ಪೈವಳಿಕೆ ಪರೇರ ಹೌಸ್‌ನ ಖಾಲಿದ್ ಯಾನೆ ಖಲೀಲ್‌ರನ್ನು ಕೊಲೆಗೈದ ಪ್ರಕರಣದ ಒಂದನೇ ಆರೋಪಿಯಾದ ಪೈವಳಿಕೆ ತಾರಿಂ ಮಂಜಿಲ್‌ನ ಪಿ.ಮುಹಮ್ಮದ್ ಯಾನೆ ಮುಕ್ರಿ ಮುಹಮ್ಮದ್‌ಗೆ ಹೈಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಎರಡನೇ ಆರೋಪಿ ಪೈವಳಿಕೆ ಕೊಡಿಯಡ್ಕದ ಇಸ್ಮಾಯಿ ಲ್‌ನನ್ನು ಖುಲಾಸೆಗೊಳಿಸಿದ  ಕಾಸರಗೋಡು ಅಡಿಶನಲ್ ಡಿಸ್ಟ್ರಿಕ್ಟ್ ಆಂಡ್ ಸೆಶನ್ಸ್ ನ್ಯಾಯಾಲಯ ೩ರ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದೆ.

೨೦೦೫ ಡಿಸೆಂಬರ್ ೨೦ರಂದು ಸಂಜೆ ವೇಳೆ ಖಲೀಲ್‌ರನ್ನು ಪೈವಳಿಕೆಯ ಕಟ್ಟೆ ಬಳಿ ಇರಿದು ಕೊಲೆಗೈಯ್ಯಲಾಗಿತ್ತು. ಆಕ್ರಮಣ ತಡೆಯಲು ಪ್ರಯತ್ನಿಸಿದ ಖಲೀಲ್‌ರ ಸ್ನೇಹಿತ ರಾಧಾಕೃಷ್ಣರಿಗೆ ಮುಕ್ರಿ ಮುಹಮ್ಮದ್ ಇರಿದು ಗಾಯಗೊಳಿಸಿರು ವುದಾಗಿ ಕೇಸು ದಾಖಲಿಸಲಾಗಿತ್ತು.

ಅಂದು ಸಂಜೆ ೭ ಗಂಟೆಗೆ ಆಕ್ರಮಣ ನಡೆದಿದೆ. ಪೈವಳಿಕೆಯ ಗರೀಬ್ ನವಾಸ್ ಹೋಟೆಲ್‌ನಿಂದ ಹೊರಬಂದ ಖಲೀಲ್ ಹಾಗೂ ರಾಧಾಕೃಷ್ಣ ಸಮೀಪದ ಕಟ್ಟೆಯ ಭಾಗಕ್ಕೆ ತೆರಳುತ್ತಿದ್ದಾಗ ಹೋಟೆಲ್ ಬಳಿಯ ಗೂಡಂಗಡಿ ಸಮೀಪ  ಮುಕ್ರಿ ಮುಹಮ್ಮದ್, ಖಲೀಲ್ ಮಧ್ಯೆ ವಾಗ್ವಾದ ನಡೆದಿದೆ. ಈವೇಳೆ ಎರಡನೇ ಆರೋಪಿ ಇಸ್ಮಾಯಿಲ್ ನೀಡಿದ ಚಾಕುವಿನಿಂದ ಮುಕ್ರಿ ಮುಹಮ್ಮದ್ ಖಲೀಲ್‌ರ ಎದೆ, ಹೊಟ್ಟೆಗೆ ಇರಿದಿರುವುದಾಗಿ ಪ್ರತ್ಯಕ್ಷದರ್ಶಿಗಳು ನ್ಯಾಯಾಲ ಯದಲ್ಲಿ ತಿಳಿಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಖಲೀಲ್‌ರನ್ನು ರಕ್ಷಿಸಲು ಪ್ರಯತ್ನಿ ಸಿದ ರಾಧಾಕೃಷ್ಣರಿಗೂ ಇರಿದು ಗಾಯಗೊಳಿಸಲಾಯಿತು. ಬೊಬ್ಬೆ ಕೇಳಿ ತಲುಪಿದ ಜನರು ಖಲೀಲ್ ಹಾಗೂ ರಾಧಾಕೃಷ್ಣರನ್ನು ಉಪ್ಪಳದ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊ ಳಗೆ ಖಲೀಲ್ ಮೃತಪಟ್ಟಿದ್ದಾರೆ. ರಾಧಾಕೃಷ್ಣರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿ ಸಲಾಗಿತ್ತು.

ಗಾಂಜಾ ವ್ಯಾಪಾರ, ಡಿಸೆಂಬರ್ ೬ರಂದು ಪೈವಳಿಕೆ ಬಳಿ ರಸ್ತೆ ಬದಿಯಲ್ಲಿದ್ದ ಮರವನ್ನು ಕಡಿದು ರಸ್ತೆಗೆ ಹಾಕಿ ಸಾರಿಗೆ ಅಡಚಣೆ ಸೃಷ್ಟಿಸಿದ ಘಟನೆ, ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಖಲೀಲ್‌ರ ಸಹೋದರನ ಪರಾಭವ ಮೊದಲಾದವುಗಳು  ಕೊಲೆಕೃತ್ಯಕ್ಕೆ ಕಾರಣವಾಗಿದೆಯೆಂಬ ಆರೋಪ ವುಂಟಾಗಿತ್ತು. ಮುಕ್ರಿ ಮುಹಮ್ಮದ್ ಗಾಂಜಾ ಮಾರಾಟ ನಡೆಸುತ್ತಿರುವುದಾಗಿ ಅಧಿಕಾರಿಗಳಿಗೆ ತಿಳಿಸುವುದಾಗಿ ಖಲೀಲ್ ಬೆದರಿಕೆಯೊಡ್ಡಿರುವುದು ಇವರೊಳಗೆ ದ್ವೇಷಕ್ಕೆ ಒಂದು ಕಾರಣವಾಗಿದೆ. ಇದಕ್ಕೆ ಬದಲಾಗಿ ಡಿಸೆಂಬರ್ ೬ರಂದು ರಸ್ತೆ ತಡೆ ಸೃಷ್ಟಿಸಿದ ಕುರಿತು ವಿವಾದ ಹುಟ್ಟಿಕೊಂ ಡಿತ್ತು. ಅನಂತರ ನಡೆದ ಪಂಚಾಯತ್ ಚುನಾವಣೆಯಲ್ಲಿ ಲೀಗ್ ಅಭ್ಯರ್ಥಿ ಯಾಗಿದ್ದ ಖಲೀಲ್‌ರ ಸಹೋದರನ ಮುಖ್ಯ ಪ್ರಚಾರಕ ಖಲೀಲ್ ಹಾಗೂ ಪ್ರತಿಸ್ಪರ್ಧಿಯ ಮುಖ್ಯ ಪ್ರಚಾರದ ನೇತೃತ್ವ ಮುಹಮ್ಮದ್‌ಗಾಗಿತ್ತು. ಇದು ಕೂಡಾ ದ್ವೇಷ ಹೆಚ್ಚಲು ಕಾರಣವಾಗಿರುವುದಾಗಿ ಹೇಳಲಾಗುತ್ತಿದೆ. ಕೊಲೆ ಕೃತ್ಯಕ್ಕೆ ಒಂದುತಿಂಗಳ ಹಿಂದೆಯೂ ಇವರೊಳಗೆ ಹೊಡೆದಾಟ ನಡೆದಿತ್ತು. ಅಂದೂ ಖಲೀಲ್  ಗಾಯಗೊಂಡಿದ್ದರು. ಪ್ರಕರಣದಲ್ಲಿ ೧೬ ಸಾಕ್ಷಿಗಳಿದ್ದರು. ಆರೋಪಿಗಳನ್ನು ಖುಲಾಸೆಗೊಳಿಸಿದ ಅಡಿಶನಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೩)ದ ತೀರ್ಪಿನ ವಿರುದ್ಧ ಖಲೀಲ್‌ರ ಪತ್ನಿ ತಾಹಿರ ನೀಡಿದ ದೂರಿನಂತೆ ಅಡಿಶನಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಖುಲಾಸೆ ಗೊಳಿಸಿದ ಆರೋಪಿ ತಪ್ಪಿತಸ್ಥನಾಗಿ ದ್ದಾನೆಂದು ಘಟನೆ ನಡೆದ ೧೪ ವರ್ಷಗಳ ಬಳಿಕ ಹೈಕೋರ್ಟ್ ಪತ್ತೆಹಚ್ಚಿದೆ.

NO COMMENTS

LEAVE A REPLY