ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿ ಚೇಸಿಸ್‌ನ ನಾಲ್ಕು ಚಕ್ರ ಕಳವು

0
29

ಕಾಸರಗೋಡು: ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಯ ಚೇಸಿಸ್‌ನ ನಾಲ್ಕು ಚಕ್ರವನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿದೆ. ಉತ್ತರ ಭಾರತದಿಂ ದ ಕಣ್ಣೂರಿಗೆ ಸಾಗಿಸಲಾಗುತ್ತಿದ್ದ ಅಶೋಕ್ ಲೈಲಾಂಡ್ ಸಂಸ್ಥೆಯ ಲಾರಿಯ ಹೊಸ ಚೈಸಿಸ್‌ನ್ನು ನಿನ್ನೆ ರಾತ್ರಿ ಚೆರುವತ್ತೂರಿನ  ಮಟ್ನಾಯಿಯ ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಿ ಚಾಲಕ ವಿಶ್ರಾಂತಿ ಪಡೆಯುತ್ತಿದ್ದನು. ಇಂದು ಬೆಳಿಗ್ಗೆಯಾಗುವುದರೊಳಗಾಗಿ ಚೇಸಿಸ್‌ನ ಒಟ್ಟು ೧೨ ಹೊಸ ಚಕ್ರಗಳ ಪೈಕಿ ನಾಲ್ಕನ್ನು ಕಳ್ಳರು ಕಳಚಿ ತೆಗೆದಿದ್ದಾರೆ. ಇಂದು ಬೆಳಿಗ್ಗೆಯಷ್ಟೇ ಇದು ಚಾಲಕನ ಗಮನಕ್ಕೆ ಬಂದಿದೆ. ತಕ್ಷಣ ಅವರು ಚಂದೇರಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕಳವುಗೈಯ್ಯಲಾಗಿದ್ದ ಚಕ್ರಗಳಿಗೆ ಲಕ್ಷಾಂತರ ರೂ. ಬೆಲೆ ಇದೆ.

ಇದೇ ರೀತಿ ತಿಂಗಳ ಹಿಂದೆ ವಿದ್ಯಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೊಳ ಪಟ್ಟ ಚೆಂಗಳ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಹನ್ನೆರಡು ಚಕ್ರಗಳು ಹೊಂದಿರುವ ಸರಕು ಹೇರಿದ್ದ ಟೋರಸ್ ಲಾರಿಯ ನಾಲ್ಕು ಚಕ್ರಗಳನ್ನು ಕಳ್ಳರು ಕದ್ದೊ ಯ್ದಿದ್ದರು. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ಶೋಧ ಆರಂಭಿಸಿದ್ದರು. ಕಳ್ಳರನ್ನು ಪತ್ತೆಹಚ್ಚಲು ಈತನಕ ಸಾಧ್ಯವಾಗಲಿಲ್ಲ. ಆ ಕಳ್ಳರ ತಂಡವೇ ಚೆರುವತ್ತೂರಿನಲ್ಲಿ ಲಾರಿ ಚಕ ಕಳವುಗೈದಿ ರಬಹುದೆಂಬ ಶಂಕೆ  ಉಂಟಾಗಿದೆ.

NO COMMENTS

LEAVE A REPLY