ನಕಲಿ ಚಿನ್ನ ಅಡವಿರಿಸಿ ವಂಚಿಸಿದ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

0
49

ಕಾಸರಗೋಡು: ನಕಲಿಚಿನ್ನದೊಡವೆ ಅಡವಿರಿಸಿ ಸಾಲ ಪಡೆದು ವಂಚಿಸಿದ ಪ್ರಕರಣ ಆರೋಪಿಗೆ ಕಾಸರಗೋಡು ಚೀಫ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯ ಐಪಿಸಿಯ ಒಂದು ಸೆಕ್ಷನ್‌ನಲ್ಲಿ ಎರಡು ವರ್ಷ ಸಜೆ ಮತ್ತು ಇನ್ನೊಂದು ಸೆಕ್ಷನ್‌ನಲ್ಲಿ ೬ ತಿಂಗಳ ಶಿಕ್ಷೆ ಸೇರಿದಂತೆ ಒಟ್ಟು ಎರಡೂವರೆ ವರ್ಷ ಶಿಕ್ಷೆ ಹಾಗೂ ೨೫,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ಮುಳಿಯಾರು ಅಮ್ಮಂಗೋಡು ನಿವಾಸಿ ಹಾಗೂ ಈಗ ಕಾಸರಗೋಡು ರಾಮದಾಸನಗರದ ತೈವಳಪ್ಪು ಜಿಸ್ತಿಯಾ ಮಂಜಿಲ್‌ನಲ್ಲಿ ವಾಸಿಸುವ ಯೂಸುಫ್ ಸಿ.ಎ (೩೨)ನಿಗೆ ಈ ಶಿಕ್ಷೆ ವಿಧಿಸಲಾಗಿದೆ.

ಶಿಕ್ಷೆಯನ್ನು ಎರಡು ವರ್ಷ ಒಟ್ಟಿಗೆ ಅನುಭವಿಸಿದರೆ ಸಾಕು. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಪಬ್ಲಿಕ್ ಸರ್ವೆಂಟ್ಸ್ ಕೋ-ಓಪರೇಟಿವ್ ಸೊಸೈಟಿಯ ಕಾಸರಗೋಡು ಸಂಜೆ ಶಾಖೆಯಲ್ಲಿ ೨೦೧೩ ಮಾರ್ಚ್ ೧೬ರಂದು ನಕಲಿ ಚಿನ್ನ ಅಡವಿರಿಸಿ ೩,೨೫,೦೦೦ ರೂ. ಸಾಲ ಪಡೆದು ವಂಚನೆಗೈದ ಆರೋಪದಂತೆ ಅಂದು ಪ್ರಸ್ತುತ ಸೊಸೈಟಿಯ ಸಂಜೆ ಶಾಖೆ ಮೆನೇಜರ್ ರವೀಂದ್ರನ್.ಕೆ ನೀಡಿದ ದೂರಿನಂತೆ ಆರೋಪಿ ಯೂಸುಫ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಆಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

 

NO COMMENTS

LEAVE A REPLY