ಲಾರಿಯ ಚಕ್ರಗಳು ಕಳವು: ಕಳ್ಳರ ದೃಶ್ಯ ಸಿ.ಸಿ. ಟಿ.ವಿಯಲ್ಲಿ ಪತ್ತೆ

0
66

ಕಾಸರಗೋಡು: ಚೆರ್ವತ್ತೂರು ಮಟ್ಲಾಯಿ ರಾಷ್ಟ್ರೀಯ ಹೆದ್ದಾರಿಯ ಲ್ಲಿ ನಿಲ್ಲಿಸಲಾಗಿದ್ದ ಲಾರಿಯ ಚೇಸಿಸ್‌ನಿಂದ ನಾಲ್ಕು ಚಕ್ರಗಳನ್ನು ಕದ್ದ ಅದೇ ರೀತಿ ಪಯ್ಯನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಲಾರಿ ಚೇಸಿಸ್‌ನ ಚಕ್ರಗಳನ್ನೂ ಕಳ್ಳರು ಕಳಚಿ ಸಾಗಿಸಿದ್ದಾರೆ. ನಿನ್ನೆ ಈ ಘಟನೆ ನಡೆದಿದೆ. ಆ ಬಗ್ಗೆ ಚಂದೇರಾ ಮತ್ತು ಪಯ್ಯನ್ನೂರು ಪೊಲೀಸರು ಪ್ರತ್ಯೇಕ ಪ್ರತ್ಯೇಕ ಕೇಸು ದಾಖಲಿಸಿಕೊಂಡಿದ್ದಾರೆ. ಚಂದೇರಾ ಪೊಲೀಸರು ಮಟ್ಲಾಯಿಯ ಪರಿಸರದಲ್ಲಿ ಸ್ಥಾಪಿಸಿದ್ದ ಸಿ.ಸಿ ಟಿ.ವಿಗಳ ದೃಶ್ಯಗಳನ್ನು ಪರಿಶೀಲಿಸಿದರೂ ಅದರಲ್ಲಿ ಕಳ್ಳರ ಚಿತ್ರ ಲಭಿಸಿಲ್ಲ. ಆದರೆ ಪಯ್ಯನ್ನೂರಿನಲ್ಲಿ ಲಾರಿ ಚಕ್ರ ಕಳಚಿ ತೆಗೆಯುತ್ತಿರುವ ದೃಶ್ಯವೊಂದು ಆ ಪರಿಸರದ ಸಿ.ಸಿ ಟಿ.ವಿ ಕ್ಯಾಮರಾದಲ್ಲಿ ಗೋಚರಿಸಿದ್ದು ಅದರಿಂದ ಕಳ್ಳರನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಿದೆ. ಅವರನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೂ ಪೊಲೀಸರು ಚಾಲನೆ ನೀಡಿದ್ದಾರೆ. ಚೆರ್ವತ್ತೂರು ಮತ್ತು ಪಯ್ಯನ್ನೂರಿನಲ್ಲಿ ಲಾರಿ ಚಕ್ರ ಕಳವುಗೈದಿರುವುದು ಒಂದೇ ತಂಡವಾಗಿದೆ ಎಂದೂ ಪೊಲೀಸರು ಶಂಕಿಸುತ್ತಿದ್ದಾರೆ.

NO COMMENTS

LEAVE A REPLY