ಮಕ್ಕಳನ್ನು ಸಾಗಿಸುತ್ತಿದ್ದ ಆಟೋ ರಿಕ್ಷಾ ಚಾಲಕ ಮದ್ಯದಮಲಿನಲ್ಲಿ

0
49

 

ಕಾಸರಗೋಡು: ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಆಟೋ ರಿಕ್ಷಾ ಚಾಲಕ ಮದ್ಯ ದಮಲಿನಲ್ಲಿರುವುದನ್ನು ಖಚಿತ ಪಡಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ನಿತಿನ್ ಕುಮಾರ್ (೩೬) ಎಂಬಾತನನ್ನು ನಿನ್ನೆ ಸಂಜೆ ಚೌಕಿ ಭಗವತಿ ನಗರದಲ್ಲಿ ಎಸ್.ಐ. ರಘುನಾಥನ್ ನೇತೃತ್ವದ ತಂಡ ಬಂಧಿಸಿದೆ. ಅನಿಯಂತ್ರಿತವಾಗಿ ಆಟೋ ಸಂಚರಿಸುತ್ತಿರುವುದನ್ನು ಕಂಡು ಸಂಶಯಗೊಂಡ ಪೊಲೀ ಸರು ತಡೆದು ನಿಲ್ಲಿಸಿ ತಪಾಸಣೆಗೈದಾಗ ಚಾಲಕ ಮದ್ಯದಮಲಿನಲ್ಲಿರುವುದು ತಿಳಿದು ಬಂದಿದೆ. ಎಲ್‌ಕೆಜಿಯಿಂದ ಆರನೇ ತರಗತಿವರೆಗಿನ ಏಳರಷ್ಟು ಮಕ್ಕಳು ಆಟೋ ರಿಕ್ಷಾದಲ್ಲಿದ್ದರು. ಇವರನ್ನು ಪೊಲೀಸ್ ಜೀಪಿಗೇ ರಿಸಿ ಅವರವರ ಮನೆಗೆ ತಲುಪಿಸಿ ಹೆತ್ತವರಲ್ಲಿ ವಿಷಯ ತಿಳಿಸಿ ಎಸ್.ಐ ಹಾಗೂ ತಂಡ ಮರಳಿತು.

ಸೆರೆಗೀಡಾದ ನಿತಿನ್ ಕುಮಾರ್ ನನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ ಆತ ಮದ್ಯ ಸೇವಿಸಿರುವು ಖಚಿತಪಡಿಸಿದ್ದು ಬಳಿಕ ಕೇಸು ದಾಖಲಿಸಿ ಸ್ವ-ಜಾಮೀನಿನಲ್ಲಿ ಬಿಡುಗಡೆಗೊಳಿಸಿ ರುವುದಾಗಿ ಪೊಲೀಸರು ತಿಳಿಸಿ ದ್ದಾರೆ. ಮದ್ಯದಮಲಿನಲ್ಲಿ ವಾಹನ ಚಲಾಯಿ ಸುವವರ ವಿರುದ್ದ ಕಠಿಣ ಕ್ರಮ ಕೈ ಗೊಳ್ಳುವುದಾಗಿ ಪೊಲೀಸರು ತಿಳಿ ಸಿದ್ದಾರೆ.

NO COMMENTS

LEAVE A REPLY