ಜುಗಾರಿ: ೯ ಮಂದಿ ಸೆರೆ

0
45

ಬದಿಯಡ್ಕ: ಜುಗಾರಿ ಆಟದಲ್ಲಿ ನಿರತರಾಗಿದ್ದ ೯ ಮಂದಿಯನ್ನು ಬದಿಯಡ್ಕ ಪೊಲೀಸರು ನಿನ್ನೆ ಸೆರೆಹಿಡಿದಿದ್ದಾರೆ. ಇವರು ಆಟಕ್ಕೆ ಬಳಸಿದ ೭,೩೬೦ರೂ.ವನ್ನು ವಶಪಡಿಸಲಾಗಿದೆ. ಪೊಲೀಸ್ ಠಾಣೆಯ ಹಿಂಬದಿಯ ಖಾಸಗಿ ಶಾಲೆಯೊಂದರ ಬಳಿಯ ಹಿತ್ತಿಲಲ್ಲಿ ಕುಳಿತು ಜುಗಾರಿ ಆಟವಾಡುತ್ತಿದ್ದಾಗ ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ಈವೇಳೆ ಅಲ್ಲಿದ್ದ ಮೂಕಂಪಾರೆ ನಿವಾಸಿಗಳಾದ ಬಷೀರ್ (೩೮), ಅಬ್ದುಲ್ ಲತೀಫ್ (೪೨), ಮಂಜುನಾಥ (೩೨), ಬದಿಯಡ್ಕ ನಿವಾಸಿಗಳಾದ ಭರತ್ (೨೯), ವಿಜಯ (೩೦), ಮಿಥುನ್ (೨೬), ಅಶ್ರಫ್(೪೧), ಅನಿಲ್ ಕುಮಾರ್ (೩೭), ಬದಿಯಡ್ಕ ಮಾರ್ಕೆಟ್ ರಸ್ತೆ ನಿವಾಸಿ ಪ್ರಸನ್ನ (೩೮)ನನ್ನು ಸೆರೆಹಿಡಿಯಲಾಗಿದೆ.

NO COMMENTS

LEAVE A REPLY