ಬಳ್ಳಕಾನದಲ್ಲಿ ಮತ್ತೆ ಆನೆಯ ಘೀಳು: ಶಬ್ದ ಹೊರಡಿಸಿ ಓಡಿಸಿದ ಸ್ಥಳೀಯರು

0
54

 

ಅಡೂರು: ಈ ಭಾಗದಲ್ಲಿ ಬೀಡು ಬಿಟ್ಟಿರುವ ಆನೆಗಳಿಂದ ಸ್ಥಳೀಯರ ನಿದ್ದೆಗೆಟ್ಟಿದೆ. ನಿನ್ನೆ ರಾತ್ರಿ ಸುಮಾರು ೧೦ ಗಂಟೆವೇಳೆಗೆ ಕರ್ನಾಟಕ-ಕೇರಳ ಗಡಿಪ್ರದೇಶವಾದ ಬಳ್ಳಕ್ಕಾನದಲ್ಲಿ ಆನೆ ಘೀಳಿಡುವುದು ಕೇಳಿ ಬಂದಿದ್ದು ಕೂಡಲೇ ಸ್ಥಳೀಯರು ಕಲ್ಲೆಸೆದು, ಶಬ್ದ ಉಂಟು ಮಾಡಿ ಓಡಿಸಲು ಯತ್ನಿಸಿದರು. ಇದರಿಂದಾಗಿ ಆನೆ ಕೃಷಿ ಸ್ಥಳವನ್ನು ಪ್ರವೇಶಿಸದಂತೆ ಮಾಡುವಲ್ಲಿ ಸಫಲರಾದರು. ಬಳಿಕ ಆನೆ ಅರಣ್ಯ ಪ್ರದೇಶದಲ್ಲಿದ್ದ ಈಚಲು ಮರಗಳನ್ನು ನಾಶಪಡಿಸಿ ತನ್ನ ಮದವನ್ನು ತೋರ್ಪಡಿಸಿದೆ. ಹಲವು ದಿನಗಳಿಂದ ಈ ಪ್ರದೇಶದಲ್ಲಿ ಆನೆ ಬೀಡು ಬಿಟ್ಟಿದ್ದು, ಅರಣ್ಯಾಧಿಕಾರಿಗಳು ಬಂದು ಹೋಗುತ್ತಿದ್ದಾರಲ್ಲದೆ ಯಾವುದೇ ಫಲ ಇಲ್ಲದಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಮೊನ್ನೆ ಕೊರತ್ತಿಮೂಲೆಯ ಜಾನಕಿ, ಅಪ್ಪಣ್ಣ ನಾಯ್ಕರ ಕೃಷಿ ಸ್ಥಳಕ್ಕೆ ಕಾಡಾನೆಗಳು ಲಗ್ಗೆ ಇಟ್ಟು ನಾಶನಷ್ಟ ಉಂಟು ಮಾಡಿತ್ತು.

NO COMMENTS

LEAVE A REPLY