ಆಟಿ: ರಾಮಾಯಣ ಪಾರಾಯಣ ಆರಂಭ

0
69

ಕಾಸರಗೋಡು: ಹಿಂದಿನ ಕಾಲದಲ್ಲಿ ಬರದ ತಿಂಗಳು ಎಂದೇ ಕರೆಸಿಕೊಂಡಿದ್ದ ಆಟಿ ಇಂದಿನಿಂದ ಆರಂಭಗೊಂಡಿದೆ. ಹಲವಾರು ಬದ ಲಾವಣೆಗಳು ಈತಿಂಗಳಲ್ಲಿ ಉಂಟಾಗಿದ್ದರೂ ಹಿಂದಿ ನಿಂದಲೇ ನಡೆದು ಬರುತ್ತಿದ್ದ ರಾಮಾಯಣ ಪಾರಾಯಣ, ಆಟಿಯಲ್ಲಿ ದೈವಗಳ ಸಂಚಾರ ಈಗಲೂ ಮುಂದು ವರಿಯುತ್ತಿದೆ.

ಇಂದು ಬೆಳಿಗ್ಗೆ ಕೆಲವು ಕಡೆಗಳಲ್ಲಿ ರಾಮಾಯಣ ಪಾರಾಯಣ ಆರಂಭಗೊಂಡಿದೆ. ಕೆಲವೆಡೆಗಳಲ್ಲಿ ಸಂಜೆ ಹೊತ್ತಿನಲ್ಲಿ ಪಾರಾಯಣ ನಡೆಸುತ್ತಾರೆ.

ಉತ್ತರಾಯಣ ಹಾಗೂ ದಕ್ಷಿಣಾಯಣಗಳ ಸಂಧಿ ಕಾಲವಾಗಿ ಆಟಿ (ಕರ್ಕಾಟಕ)ತಿಂಗಳು ಬರುತ್ತಿದ್ದು, ಈ ವೇಳೆ ಶುಭ ಕಾರ್ಯಗಳಿಗೆ ನಿಷಿದ್ಧ ಎಂದು ಹಿರಿಯರು ಸೂಚಿಸಿದ್ದಾರೆ.

ಎಡೆಬಿಡದೆ ಸುರಿವ ಮಳೆಯಿಂ ದಾಗಿ ಕೃಷಿ ಕೆಲಸಗಳು ಕೂಡಾ ವಿರಾಮ ವಾಗಿರುವ ದಿನಗಳಾಗಿತ್ತು ಹಿಂದೆ ಈ ತಿಂಗಳಲ್ಲಿ. ಆದರೆ ಕಾಲ ಬದಲಾದಂತೆ ಆಟಿ ತಿಂಗಳಲ್ಲಿ ಪ್ರಕೃತಿಯೂ ಬದಲಾಗಿದೆ. ಈಗ ಮಳೆಯಂತೂ ಕಡಿಮೆಯಾ ಗಿದ್ದು ಕೃಷಿ ಕೆಲಸಗಳೂ ಕಡಿಮೆಯಾಗುತ್ತಿದೆ. ಆಟಿ ತಿಂಗಳಲ್ಲಿ ವಿಶೇಷವಾಗಿ ಆಟಿ ಕಳಂಜ ಊರು ಸುತ್ತಲು ಬರುತ್ತಾನೆ. ದೈವಸ್ಥಾನಗಳ ಬಾಗಿಲು ಈ ತಿಂಗಳಲ್ಲಿ ಮುಚ್ಚಲಾಗುತ್ತ್ತದೆ.

NO COMMENTS

LEAVE A REPLY