ಎಂಡೋಸಲ್ಫಾನ್ ಸಂತ್ರಸ್ತ ಕುಸಿದು ಬಿದ್ದು ಮೃತ್ಯು

0
46

ಬದಿಯಡ್ಕ: ಎಂಡೋಸಲ್ಫಾನ್ ಯಾದಿಯಲ್ಲಿ ಹೆಸರು ಒಳಗೊಂಡಿದ್ದ ಸಂತ್ರಸ್ತ ಕುಸಿದು ಬಿದ್ದು ನಿಧನ ಹೊಂದಿದರು. ಕನ್ಯಪ್ಪಾಡಿ ಬಾಪಾಲಿ ಪೊನಂ ಕಂಬಾರ್ ಮನೆಯ ನಿವಾಸಿ ಮುಹಮ್ಮದ್‌ರ ಪುತ್ರ ಜುನೈದ್ (೨೩) ನಿನ್ನೆ ಸಂಜೆ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟರು. ಹೃದಯ ಸಂಬಂಧಿ ಖಾಯಿಲೆಯಿಂದ ಮಂಗಳೂರು, ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಸಂಬಂಧಿಕರ ಮನೆಗೆ ಕುಟುಂಬ ತೆರಳುವ ಸಿದ್ಧತೆಯಲ್ಲಿರುವಾಗ ಜುನೈದ್ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು.

ಇವರ ಇಬ್ಬರು ಸಹೋದರರು ಕೂಡಾ ಎಂಡೋಸಲ್ಫಾನ್ ಸಂತ್ರಸ್ತ ರಾಗಿದ್ದು, ಬದಿಯಡ್ಕ ಪಂಚಾಯತ್‌ನ ೩ನೇ ವಾರ್ಡ್‌ನ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಒಳಗೊಂಡಿ ದ್ದಾರೆ. ಇವರಲ್ಲಿ ಓರ್ವ ಅಬ್ದುಲ್ ರಹಿಮಾನ್ ಒಂದು ವರ್ಷದ ಹಿಂದೆ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಇನ್ನೋರ್ವ ಸಹೋದರ ಉಸ್ಮಾನ್ ಅಂಧನಾಗಿದ್ದಾರೆ.

ಮೃತ ಜುನೈದ್ ತಂದೆ, ತಾಯಿ ನಫೀಸ, ಇನ್ನೋರ್ವ ಸಹೋದರ ಅಬ್ದುಲ್ ಅಸೀಸ್, ಸಹೋದರಿಯ ರಾದ ಜಂಶೀನಾ, ಆಯಿಷಾ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY