ಕುಂಬಳೆ ಸಹಕಾರಿ ಬ್ಯಾಂಕ್: ೮೫೩ ಮಂದಿಯ ಸದಸ್ಯತ್ವ ಅಮಾನತು ಗೊಳಿಸಿದ ರಿಟರ್ನಿಂಗ್ ಆಪೀಸರ್‌ರ ಕ್ರಮ ಹೈಕೋರ್ಟ್‌ನಿಂದ ರದ್ದು

0
50

 

ಕೊಚ್ಚಿ: ಕುಂಬಳೆ ಸರ್ವೀಸ್ ಸಹಕಾರಿ ಬ್ಯಾಂಕ್‌ನ ೮೫೩ ಸದಸ್ಯರು ಪ್ರಾಥಮಿಕ ಮತದಾರ ಪಟ್ಟಿಯಿಂದ ತೆರವುಗೊಳಿಸಿರುವುದನ್ನು ಹೈಕೋರ್ಟ್ ತಡೆದಿದೆ. ಈ ತಿಂಗಳ ೨೧ರಂದು ನಡೆಯುವ ಬ್ಯಾಂಕ್‌ನ ಆಡಳಿತ ಸಮಿತಿ ಚುನಾವಣೆಯಲ್ಲಿ ಅಡ್ಮಿನಿಸ್ಟ್ರೇಟರ್ ನೇಮಕಗೊಳಿಸಿದ ಚುನಾವಣಾಧಿಕಾರಿ ಹೊರತುಪಡಿಸಿ ದ ೮೫೩ ಮಂದಿಗೂ ಮತದಾನದ ಹಕ್ಕನ್ನು ಪುನಃ ಸ್ಥಾಪಿಸಿ ಹೈಕೋರ್ಟ್  ಇವರ ಮತಗಳನ್ನು ಪ್ರತ್ಯೇಕ ಪೆಟ್ಟಿಗೆಯಲ್ಲಿ ಬಚ್ಚಿಡಬೇಕೆಂದು ಆ ಮತಗಳನ್ನು ಬೇರೆಯೇ ಸಂಗ್ರಹಿಸಿಡ ಬೇಕೆಂದು, ನ್ಯಾಯಾಲಯಕ್ಕೆ ತಿಳಿಸಬೇಕೆಂದು ಅಡ್ಮಿನಿಸ್ಟ್ರೇಟರ್‌ಗೆ ಕೋರ್ಟ್ ನಿರ್ದೇಶ ನೀಡಿದೆ. ಹೈಕೋರ್ಟ್‌ನ ಅನುಮತಿಯ ಬಳಿಕವೇ ಚುನಾವಣೆಯ ಫಲಿತಾಂಶ ಘೋಷಿಸಬೇಕೆಂದು ನಿರ್ದೇಶಿಸಲಾಗಿದೆ.

ಸಹಕಾರ ಭಾರತಿ ಆಡಳಿತದಲ್ಲಿ ದ್ದ ಕುಂಬಳೆ ಸಹಕಾರಿ ಬ್ಯಾಂಕ್‌ನಲ್ಲಿ ಕಾರ್ಯದರ್ಶಿಯ ಬಗ್ಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಆಡಳಿತ ಸಮಿತಿ ಯನ್ನು ಬರ್ಖಾಸ್ತುಗೊಳಿಸಿ ಅಡ್ಮಿನಿಸ್ಟ್ರೇಟರ್ ಆಡಳಿತ ಏರ್ಪಡಿಸಲಾಗಿತ್ತು.

ಅಡ್ಮಿನಿಸ್ಟ್ರೇಟ್ ಆಡಳಿತ ವಹಿಸಿ ಕೊಂಡ ಒಂದು ವರ್ಷದೊಳಗೆ ಚುನಾ ವಣೆ ನಡೆಸಿ ಆಡಳಿತವನ್ನು ಜನಪರ ಸಮಿತಿಗೆ ಹಸ್ತಾಂತರಿಸಬೇಕಾಗಿದೆ. ಆದರೆ ಒಂದು ವರ್ಷ ಕಳೆದರೂ ಅಡ್ಮಿನಿಸ್ಟ್ರೇಟರ್ ಚುನಾವಣೆ ನಡೆಸಲು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಸಹಕಾರ ಭಾರತಿ ನ್ಯಾಯಾಲಯವನ್ನು ಸಮೀಪಿ ಸಿತ್ತು. ಚುನಾವಣೆ ನಡೆಸಲು ನ್ಯಾಯಾ ಲಯ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಚುನಾವಣೆ ಕ್ರಮಗಳನ್ನು ಆರಂಭಿಸ ಲಾಗಿದೆ. ಇದರಂತೆ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ವೇಳೆ ಹಿಂದಿನ ಸಹಕಾರ ಭಾರತಿ ಆಡಳಿತ ಸಮಿತಿ ಸದಸ್ಯತ್ವ ನೀಡಿದ ೮೫೩ ಮಂದಿ ಮತದಾರರನ್ನು ಚುನಾವಣಾಧಿಕಾರಿ ಅಸಿಂಧುಗೊಳಿಸಿದ್ದಾರೆ.

ಇದರ ವಿರುದ್ಧ ಬ್ಯಾಂಕ್‌ನ ಸದಸ್ಯರಾದ ಎಂ. ಗೋಪಾಲಕೃಷ್ಣ ಭಟ್, ಜಯಲಕ್ಷ್ಮಿ, ಸೋಮಾವತಿ ಎಂಬಿವರು ಹೈಕೋರ್ಟ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಹಕಾರಿ ಸಂಸ್ಥೆಯ ಕಾನೂನಿಗೆ ವಿರುದ್ಧವಾಗಿ ರಿಟರ್ನಿಂಗ್ ಅಧಿಕಾರಿಯ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿರುವುದು. ಸದಸ್ಯತ್ವ ರದ್ದುಗೊಳಿ ಸಿದ ಬಗ್ಗೆ, ಚುನಾವಣೆ ವಿಳಂಬಗೊಳಿ ಸುವುದಕ್ಕೆ ವಿರುದ್ಧವಾಗಿ ಸಹಕಾರ ಭಾರತಿ ಎ.ಆರ್. ಕಚೇರಿ ಮುಂಭಾಗ ಧರಣಿ ನಡೆಸಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಸಹಕಾರ ಭಾರತಿ ರಾಷ್ಟ್ರೀಯ ಜನರಲ್ ಸೆಕ್ರೆಟರಿ ಕೆ. ಕರುಣಾಕರನ್ ನಂಬ್ಯಾರ್ ಸ್ವಾಗತಿಸಿದರು.

NO COMMENTS

LEAVE A REPLY