ತುಂಡಾಗಿ ಬಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ಗೃಹಿಣಿ ಮೃತ್ಯು

0
60

ಕುಂಬಳೆ: ತುಂಡಾಗಿ ಬಿದ್ದ ವಿದ್ಯುತ್ ತಂತಿ ಎಂದು ತಿಳಿಯದೆ ಹಿತ್ತಿಲಲ್ಲಿದ್ದ ತಂತಿಯನ್ನು ತೆಗೆಯುವ ವೇಳೆ ಗೃಹಿಣಿ ಶಾಕ್ ತಗಲಿ ಮೃತಪಟ್ಟರು.

ತಂತಿ ಕೈಯಲ್ಲಿ ಹಿಡಿದುಕೊಂಡ ಸ್ಥಿತಿಯಲ್ಲಿ ಹಿತ್ತಿಲಲ್ಲಿ ಬಿದ್ದಿದ್ದ ಮೃತದೇಹವನ್ನು ದೂರದ ಸಂಬಂಧಿಕರು ಇಂದು ಬೆಳಿಗ್ಗೆ ಪತ್ತೆಹಚ್ಚಿದ್ದಾರೆ.

ಶೇಡಿಕಾವು ನಿವಾಸಿ ದಿ| ರಾಧಾಕೃಷ್ಣ ಮಯ್ಯರ ಪತ್ನಿ ಕಲಾವತಿ (೫೨) ಈರೀತಿ ದಾರುಣವಾಗಿ ಮೃತಪಟ್ಟಿದ್ದಾರೆ. ಕಲಾವತಿ ಏಕಾಂಗಿಯಾಗಿ ಮನೆಯಲ್ಲಿ  ವಾಸಿಸುತ್ತಿ ದ್ದಾರೆ. ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದರೂ ಅವರೆಲ್ಲ ವಿವಾಹವಾಗಿ ಪತಿಗೃಹದಲ್ಲಿದ್ದಾರೆ. ಮನೆಯಿಂದ ಅಲ್ಪ ದೂರದಲ್ಲಿ ಕಟ್ಟಿಗೆ ಸಂಗ್ರಹಿಸಿಡಲಾಗಿದೆ. ಅದರಿಂದ ಕಟ್ಟಿಗೆಯನ್ನು ತೆಗೆಯಲು ಹೋದಾಗ ದುರಂತ ಸಂಭವಿಸಿರಬೇಕೆಂದು ಶಂಕಿಸಲಾಗಿದೆ.

ನಿನ್ನೆ ಸಂಜೆ ಮೂರು ಗಂಟೆಯಿಂದ ಮಕ್ಕಳು, ಸಂಬಂಧಿಕರು ಇವರನ್ನು ಫೋನ್‌ನಲ್ಲಿ ಸಂಪರ್ಕಿಸಿದಾಗ ಫೋನ್ ತೆಗೆಯದ ಹಿನ್ನೆಲೆಯಲ್ಲಿ ಅವರು ಇಂದು ಬೆಳಿಗ್ಗೆ ಮನೆಗೆ ತಲುಪಿದ್ದರು. ಮನೆಯ ಬಾಗಿಲು ತೆರೆದ ಸ್ಥಿತಿಯಲ್ಲಿದ್ದು, ಕಲಾವತಿಯನ್ನು ಮನೆಯಲ್ಲಿ ಕಾಣದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಹಿತ್ತಿಲಲ್ಲಿ ವಿದ್ಯುತ್ ತಂತಿಯನ್ನು ಹಿಡಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಮಾಹಿತಿ ತಿಳಿದು ಸ್ಥಳೀಯರು ಸ್ಥಳಕ್ಕೆ ತಲುಪಿದ್ದಾರೆ. ಮೃತರು ಮಕ್ಕಳಾದ ಚಿತ್ರ, ಚೈತ್ರಾ, ಪವಿತ್ರ  ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

NO COMMENTS

LEAVE A REPLY