ಚುನಾವಣಾ ತಕರಾರು ಅರ್ಜಿ ಕೊನೆಗೂ ಇತ್ಯರ್ಥ ಮಂಜೇಶ್ವರ ವಿಧಾನಸಭಾ ಉಪಚುನಾವಣೆ ಹಾದಿ ಸುಗಮ

0
57

 

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾ ತಕರಾರು ಪ್ರಕರಣ ಕೊನೆಗೂ ಇತ್ಯರ್ಥಗೊಂಡಿದೆ.

ಕಳೆದ ಚುನಾಣೆಯಲ್ಲಿ ಈ ಕ್ಷೇತ್ರದಲ್ಲಿ ಮುಸ್ಲಿಂಲೀಗ್ (ಯುಡಿಎಫ್)ನ ಪಿ.ಬಿ. ಅಬ್ದುಲ್ ರಜಾಕ್‌ರ ಗೆಲುವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಬಿಜೆಪಿ ಉಮೇದ್ವಾರ ಕೆ. ಸುರೇಂದ್ರನ್ ನಿನ್ನೆ ವಿದ್ಯುಕ್ತವಾಗಿ ಹಿಂಪಡೆದುಕೊಂಡಿದ್ದಾರೆ.

ಕಳೆದಬಾರಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ನಿಧನಹೊಂದಿದವರು ಮತ್ತು ಊರಲ್ಲಿಲ್ಲದ ಮತದಾರರ ಹೆಸರಲ್ಲಿ ಕಳ್ಳಮತ ಚಲಾಯಿಸಲಾಗಿದೆಯೆಂದೂ, ಅದು ಚಲಾಯಿಸದಿದ್ದರೆ  ಚುನಾವಣೆ ಫಲಿತಾಂಶ ಬೇರೆಯೇ ಆಗಿ ತನ್ನ ಗೆಲುವು ಖಚಿತಗೊಳ್ಳುತ್ತಿತ್ತೆಂದೂ, ಅದರಿಂದ ಯುಡಿಎಫ್ ಉಮೇದ್ವಾರ ಪಿ.ಬಿ. ಅಬ್ದುಲ್ ರಜಾಕ್‌ರ ಆಯ್ಕೆಯನ್ನು ರದ್ದುಪಡಿಸಬೇಕೆಂದು ಕೋರಿ ಕೆ. ಸುರೇಂದ್ರನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ಮುಂದುವರಿಯುತ್ತಿದ್ದ ವೇಳೆ ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ೨೦೧೮ ಅಕ್ಟೋಬರ್ ೨೦ರಂದು  ನಿಧನಹೊಂದಿದ್ದರ. ಅವರ ನಿಧನದಿಂದಾಗಿ ಈ ಪ್ರಕರಣವನ್ನು ಇನ್ನೂ ಮುಂದುವರಿಸಬೇಕೇ ಎಂದು ನ್ಯಾಯಾಲಯ ಸುರೇಂದ್ರನ್‌ರಲ್ಲಿ ಕೇಳಿತ್ತು. ಅದಕ್ಕೆ ಪೂರಕ ನಿಲುವು ತಳೆದು ಚುನಾವಣಾ ತಕರಾರು ಅರ್ಜಿ ಯನ್ನು ತಾನು ಹಿಂತೆಗೆದುಕೊಳ್ಳುವು ದಾಗಿ ಸುರೇಂದ್ರನ್ ತಿಳಿಸಿ ಬಳಿಕ ನ್ಯಾಯಾಲಯಕ್ಕೆ ಹೊಸ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ಪರಿಶೀಲಿಸುವ ವೇಳೆ ಚುನಾವಣಾ ತಕರಾರು ಅರ್ಜಿಯನ್ನು ಕೆ. ಸುರೇಂದ್ರನ್ ಹಿಂತೆಗೆದುಕೊಂಡಲ್ಲಿ ಈ ಪ್ರಕರಣದ ವಿಚಾರಣೆಗಾಗಿ ತಗಲಿದ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಬೇಕೆಂದು ಪ್ರತಿವಾದಿಯಾದ ಪಿ.ಬಿ. ಅಬ್ದುಲ್ ರಜಾಕ್‌ರ ಪುತ್ರ ನ್ಯಾಯಾಲಯಕ್ಕೆ ಹೊಸ ಅರ್ಜಿ ಸಲ್ಲಿಸಿದ್ದರು. ಈ ಕೇಸಿಗೆ ತಗಲಿದ ವೆಚ್ಚ ವನ್ನು ತನ್ನಿಂದಲೇ ವಸೂಲಿ ಮಾಡುವ ಹಾಗಿದ್ದಲ್ಲಿ ತಾನು ಕೇಸನ್ನು ಮುಂದು ವರಿಸುವೆನೆಂದು ನಂತರ ಸುರೇಂದ್ರನ್ ತನ್ನ ನಿಲುವನ್ನು ನ್ಯಾಯಾಲಯಕ್ಕೆ ತಿಳಿಸಿದ್ದರು.  ಅದರಿಂದ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು.

ಹೈಕೋರ್ಟ್‌ನಲ್ಲಿ ನಿನ್ನೆ ಈ ಪ್ರಕರಣದ ವಿಚಾರಣೆ ಮತ್ತೆ ಮುಂದುವರಿದಾಗ ಕೇಸಿಗೆ ತಗಲಿದ ವೆಚ್ಚವನ್ನು ಸುರೇಂದ್ರನ್‌ರಿಂದಲೇ ವಸೂಲಿ ಮಾಡಬೇಕೆಂದು ಆಗ್ರಹಿಸಿ ತಾನು ಸಲ್ಲಿಸಿದ ಅರ್ಜಿಯನ್ನು ಹಿಂಪಡೆದುಕೊಳ್ಳುವುದಾಗಿ ಪ್ರತಿವಾದಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ತಾನು ಚುನಾವಣಾ ತಕರಾರು ಅರ್ಜಿಯನ್ನು ಹಿಂತೆದು ಕೊಳ್ಳುವುದಾಗಿ ಸುರೇಂದ್ರನ್ ನ್ಯಾಯಾ ಲಯಕ್ಕೆ ಬಳಿಕ ತಿಳಿಸಿದರು. ಇದನ್ನೆಲ್ಲಾ ಪರಿಗಣಿಸಿ ಹೈಕೋರ್ಟ್ ಈ ಪ್ರಕರಣ ವನ್ನು ಅಲ್ಲಿಗೆ ಕೊನೆಗೊಳಿಸಿ  ತೀರ್ಪು ನೀಡಿದೆ. ಇದರಿಂದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಉಪಚುನಾವಣೆಗಿರುವ ಬಾಗಿಲು ತೆರೆದಂತಾಗಿದೆ.

NO COMMENTS

LEAVE A REPLY