ಉರಿಯುತ್ತಿದ್ದ ಸೌದೆಯಿಂದ ಮಗನ ಮುಖಕ್ಕೆ ಹೊಡೆದ ತಂದೆ ಸೆರೆ

0
59

ಹೊಸದುರ್ಗ: ಉರಿಯುತ್ತಿದ್ದ ಕಟ್ಟಿಗೆಯಿಂದ ಮಗನ ಮುಖಕ್ಕೆ ಹೊಡೆದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಚಿಟ್ಟಾರಿಕ್ಕಲ್ ಕಾಟಾಂಕವಲ ನಿವಾಸಿ ಸುರೇಶ್(೪೭) ಎಂಬಾತನನ್ನು ಚಿಟ್ಟಾರಿಕಲ್ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದೆ. ಶಾಲೆಗೆ ತೆರಳಲು ಮಗ ಹಿಂಜರಿದನೆಂದು ಕೋಪಗೊಂಡ ಸುರೇಶ್ ಒಲೆಯಿಂದ ಉರಿಯುತ್ತಿದ್ದ ಸೌದೆಯಿಂದ ಮುಖಕ್ಕೆ ಹೊಡೆದನೆಂದು ದೂರಲಾಗಿದೆ. ಈ ಬಗ್ಗೆ ಬಾಲಕನ ತಾಯಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಾಲ್ಕು ತಿಂಗಳ ಹಿಂದೆಯೂ ಇನ್ನೋರ್ವ ಪುತ್ರನಿಗೂ ಸುರೇಶ್ ಕ್ರೂರವಾಗಿ ಹಲ್ಲೆಗೈದಿದ್ದಾನೆಂದು ಹೇಳಲಾಗುತ್ತಿದೆ. ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದಿರುವುದಾಗಿ ದೂರಲಾಗಿದೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗೆ ರಿಮಾಂಡ್ ವಿಧಿಸಲಾಗಿದೆ.

NO COMMENTS

LEAVE A REPLY