ಜ್ವರ ತಗಲಿ ಕಾಲೇಜು ವಿದ್ಯಾರ್ಥಿ ಮೃತ್ಯು

0
64

ಸೀತಾಂಗೋಳಿ: ಜ್ವರಕ್ಕೆ ಜಿಲ್ಲೆಯಲ್ಲಿ ಇನ್ನೋರ್ವ ಬಲಿಯಾಗಿದ್ದಾನೆ. ಮುಕಾರಿಕಂಡ ನಿವಾಸಿ, ಕಾಸರಗೋಡು ಸರಕಾರಿ ಕಾಲೇಜಿನ ಪದವಿ ವಿದ್ಯಾರ್ಥಿ ಎಬಿವಿಪಿ ಕಾರ್ಯಕರ್ತ ಕಿರಣ್ ಕುಮಾರ್(೧೯) ಜ್ವರ ತಗಲಿ ಮೃತಪಟ್ಟಿದ್ದಾನೆ. ಪೊಲೀಸ್ ಸಿಬ್ಬಂದಿ ಕಿಟ್ಟಣ್ಣ-ವಿಜಯ ಲಕ್ಷ್ಮಿ ದಂಪತಿ ಪುತ್ರನಾದ ಈತ ಕಳೆದೆರಡು ದಿನಗಳಿಂದ ಜ್ವರಬಾಧಿಸಿ ಮಂಗಳೂ ರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದನು. ನಿನ್ನೆ ಮಧ್ಯಾಹ್ನ ಮೃತಪಟ್ಟನು. ಮೃತ ಕಿರಣ್ ಕುಮಾರ್ ತಂದೆ, ತಾಯಿ, ಸಹೋದರಿ ಕಾವ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

ಮೃತರ ಮನೆಗೆ ಆರ್.ಎಸ್. ಎಸ್ ತಾಲೂಕು ಶಾರೀರಿಕ್ ಪ್ರಮುಖ್ ವೇಣುಗೋಪಾಲ ಅನಂತಪುರ, ಬಿಜೆಪಿ ನೇತಾರರಾದ ಜಯಂತ ಪಾಟಾಳಿ, ಪುಷ್ಪಾ ಮುಗುಮೇರ್, ಪದ್ಮನಾಭ ಬಾಡೂರು, ಸಿಪಿಎಂ ನೇತರರಾದ ಶಂಕರ ರೈ ಮಾಸ್ತರ್, ರಾಧಾಕೃಷ್ಣ ಬಾಡೂರು, ವಾರ್ಡ್ ಪ್ರತಿನಿಧಿ ಚಂದ್ರ ಮುಕಾರಿ ಕಂಡ, ಹಿಂದೂ ಐಕ್ಯವೇದಿಕೆಯ ವೇಣುಗೋಪಾಲ ರೈ ಕಿನ್ನಿಮಜಲು, ಗಣೇಶ್ ಪಿ.ಎಂ., ಬಿ.ಎಂ.ಎಸ್‌ನ ರಾಮಚಂದ್ರ ಕುಲಾಲ್, ಹರೀಶ್ ಸೇರಿದಂತೆ ವಿವಿಧ ಪಕ್ಷ-ಸಂಘಟನೆಗಳ ನೇತಾರರು, ಕಾಲೇಜು ಅಧ್ಯಾಪಕರು ಭೇಟಿ ನೀಡಿ ಸಂತಾಪ ಸೂಚಿಸಿದರು.

NO COMMENTS

LEAVE A REPLY