ತೀವ್ರಗತಿಯಲ್ಲಿ ಮುಂದುವರಿಯುತ್ತಿರುವ ಕಡಲ್ಕೊರೆತ: ಹಲವು ಮನೆಗಳು ನೀರುಪಾಲಾಗುವ ಭೀತಿ

0
61
Exif_JPEG_420

ಉಪ್ಪಳ: ಮುಸೋಡಿ, ಮಣಿ ಮುಂಡ, ಹನುಮಾನ್‌ನಗರಗಳಲ್ಲಿ ಕಡಲ್ಕೊರೆತ ಈಗಲೂ ತೀವ್ರಗತಿ ಯಲ್ಲಿ ಮುಂದುವರಿ ಯುತ್ತಿದ್ದು, ಜನರು ಭೀತಿಯಲ್ಲಿದ್ದಾರೆ. ಮುಸೋ ಡಿಯ ಅಬ್ಬಾಸ್ ಎಂಬವರ ಮನೆ ಯಾವುದೇ ಕ್ಷಣ ನೀರು ಕೊಟ್ಟಿಕೊಂ ಡು ಹೋಗುವ ಸ್ಥಿತಿಯಲ್ಲಿದೆ. ಅಲ್ಲದೆ ಅಬ್ಬಾಸ್ ಎಂಬವರ ಮನೆಯ   ಸಮೀಪದವರೆಗೆ ತೆರೆ ಅಪ್ಪಳಿಸುತ್ತಿದೆ. ಹಲವಾರು ಮನೆಗಳು ನೀರುಪಾಲಾಗುವ ಭೀತಿಯಿದ್ದು, ಕೆಲವು ಕುಟುಂಬಗಳನ್ನು ಇಲ್ಲಿಂದ ಸ್ಥಳಾಂತರಿಸಲಾಗಿದೆ.

ಮಣಿಮುಂಡದಲ್ಲಿ ಈಗಾಗಲೇ ಅಬ್ದುಲ್ ರಶೀದ್, ಸಯ್ಯದ್ ಇಬ್ರಾಹಿಂ ಎಂಬವರ ಮನೆಗಳು ಸಮುದ್ರಪಾಲಾಗಿದ್ದು, ಇಲ್ಲಿನ ಜಯರಾಮ, ಕೇಶವ, ಅವ್ವಾಬಿ, ಅಬ್ದುಲ್ಲ ಎಂಬವರ ಮನೆ ಅಪಾಯದಲ್ಲಿದೆ. ಇವರನ್ನು ಕೂಡಾ ಸ್ಥಳಾಂತರಗೊಳಿ ಸಲಾಗಿದೆ. ಪರಿಸರದ ಹನುಮಾನ್ ನಗರದಲ್ಲಿ ರಸ್ತೆ ಸಂಪೂರ್ಣ ಸಮುದ್ರಪಾಲಾಗಿದೆ. ಇಲ್ಲಿನ ಮೀನು ಕಾರ್ಮಿಕರಾದ ಲಕ್ಷ್ಮಣ, ಮೋಹಿನಿ, ಯಮುನ, ಜಯಕುಮಾರ, ಶರ್ಮಿಳ, ಅಶೋಕ, ಅನಿಲ್ ಸಹಿತ ಹಲವು ಮಂದಿಯ ಮನೆಗಳು ಅಪಾಯದಂ ಚಿನಲ್ಲಿದ್ದು, ಹಲವರ ಆವರಣಗೋಡೆ ಕುಸಿದುಬಿದ್ದಿದೆ. ಮೋಹಿನಿಯವರ ಕುಟುಂಬವನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ.

NO COMMENTS

LEAVE A REPLY