ಬಸ್‌ನಿಂದ ಮೂರೂವರೆ ಲೀಟರ್ ಮದ್ಯ ವಶ

0
50

 

ಉಪ್ಪಳ: ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆ ಬಸ್‌ನಿಂದ ವಾರೀಸುದಾರರಿಲ್ಲದ ಮೂರೂವರೆ ಲೀಟರ್ ಕರ್ನಾಟಕ ನಿರ್ಮಿತ ವಿದೇಶ ಮದ್ಯ ವಶಪಡಿಸಿದ್ದಾರೆ.

ಮಧ್ಯಾಹ್ನ ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ತೆರಳು ತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸನ್ನು ಅಧಿಕಾರಿಗಳು ತಪಾಸಣೆ ನಡೆಸುತ್ತಿ ದ್ದಾಗ ಹಿಂಬದಿ ಸೀಟ್‌ನ ಡಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ೧೮೦ ಮಿಲ್ಲಿಯ ೧೯ ಬಾಟಲಿ ಒಟ್ಟು ಮೂರೂವರೆ ಲೀಟರ್ ಮದ್ಯ ಪತ್ತೆ ಯಾಗಿದೆ. ಎಕ್ಸೈಸ್ ಇನ್‌ಸ್ಪೆಕ್ಟರ್ ಮುರಳೀಧರನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

NO COMMENTS

LEAVE A REPLY