ಸ್ಟೌವ್ ಮಗುಚಿ ದೇಹದ ಮೇಲೆ ಬಿದ್ದು ಮಹಿಳೆ ಮೃತ್ಯು

0
56

ಕಾಸರಗೋಡು: ಮನೆಯಲ್ಲಿ ಅಡುಗೆ ಕೆಲಸದಲ್ಲಿ ತೊಡಗಿರುವ ವೇಳೆ ಸ್ಟೌವ್ ಮಗುಚಿ ಬೆಂಕಿ ತಗಲಿ ಗೃಹಿಣಿ ಸಾವನ್ನಪ್ಪಿದ ಘಟನೆ ನಡೆದಿದೆ. ಚಂದೇರಾ ಪೊಲೀಸ್ ಠಾಣೆ ಸಮೀಪದ ಒತ್ತುಕುನ್ನುನಲ್ಲಿ ವಾಸಿಸುತ್ತಿರುವ ಎಂ.ಕೆ. ಸೈನಬ(೫೧) ಸಾವನ್ನಪ್ಪಿದ ಮಹಿಳೆ. ತಿಂಡಿ ತಿನಸುಗಳನ್ನು ತಯಾರಿಸಿ ಮಾರಾ ಟ ಮಾಡುತ್ತಿದ್ದ ಸೈನಬ ನಿನ್ನೆಯೂ ತಿಂಡಿ ಮಾಡುತ್ತಿದ್ದ ವೇಳೆ ಸ್ಟೌವ್ ಮಗುಚಿ ಬೆಂಕಿ ತಗಲಿದೆ. ಗಂಭೀರ ಗಾಯ ಗೊಂಡ ಅವರನ್ನು ಪರಿಯಾರಂ ವೈದ್ಯ ಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ದಿ|ಸಾಲಿಯವರ ಪತ್ನಿಯಾಗಿ ರುವ ಸೈನಬ, ಮಕ್ಕಳಾದ ಸಜ್ನಾ, ಸಲೀಹ್, ನಫೀನಾ, ಸಜೀರ್, ಅಳಿಯಂದಿರಾದ ಅಬ್ದುಲ್ಲ, ಶಂಶಾದ್, ಅಸ್ಲಂ, ಸಹೋದರ-ಸಹೋದರಿಯ ರಾದ ಸಫರಲಿ, ಮೊಹಮ್ಮದ್‌ಕುಂಞಿ, ಝುಬೈರ್, ಸೂಫಿ, ನಾಝರ್, ಫಾತಿಮ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. 

NO COMMENTS

LEAVE A REPLY