ಹಳದಿ ಕಾಮಾಲೆ ಬಾಧಿಸಿ ಜೀಪು ಚಾಲಕ ಮೃತ್ಯು

0
57

ಪೆರ್ಲ: ಹಳದಿಕಾಮಾಲೆ ಬಾಧಿ ಸಿ ಜೀಪು ಚಾಲಕ ಮೃತಪಟ್ಟರು. ಪೆರ್ಲ ಬಳಿಯ ಬಜಕೂಡ್ಲು ನಿವಾಸಿ ಮಾಣಿ ಆಚಾರ್ಯ ಎಂಬವರ ಪುತ್ರ ನಿತ್ಯಾನಂದ ಆಚಾರ್ಯ (೩೫) ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಇವರು ಪೆರ್ಲದಲ್ಲಿ ಜೀಪು ಚಾಲಕ ನಾಗಿದ್ದರು. ಹದಿನೈದು ದಿನಗಳಿಂದ ಇವರಿಗೆ ಹಳದಿ ಕಾಮಾಲೆ ಬಾಧಿಸಿತ್ತು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನಿನ್ನೆ ಮೃತಪಟ್ಟರು. ಮೃತರು ತಂದೆ, ತಾಯಿ ಮೀನಾಕ್ಷಿ, ಸಹೋದರಿಯ ರಾದ ಯಶೋದ, ದುರ್ಗಾಶ್ರೀ, ಜ್ಞಾನೇಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY