ಅಂಗಡಿಗೆ ತೆರಳಿದ ಮಧ್ಯವಯಸ್ಕ ಕುಸಿದುಬಿದ್ದು ಮೃತ್ಯು

0
51

ಕಾಸರಗೋಡು: ಮೊಬೈಲ್ ಫೋನ್ ರೀಚಾರ್ಜ್‌ಗೆಂದು ಅಂಗಡಿಗೆ ತೆರಳಿದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಕಾಸರಗೋಡು ಫೋರ್ಟ್ ರೋಡ್‌ನ ಅಬ್ದುಲ್ ಲತೀಫ್ (೫೬) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ರಾತ್ರಿ ೮ ಗಂಟೆಗೆ ಟ್ರಾಫಿಕ್ ಜಂಕ್ಷನ್‌ನ  ಅಂಗಡಿಗೆ ತೆರಳಿದ್ದು ಅಲ್ಲಿ ಕುಸಿದು ಬಿದ್ದ ಅವರನ್ನು ನಾಗರಿಕರು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಖತ್ತರ್‌ನಲ್ಲಿದ್ದ ಅಬ್ದುಲ್ ಲತೀಫ್ ಹತ್ತು ದಿನಗಳ ಹಿಂದೆ ಊರಿಗೆ ಬಂದಿದ್ದರು. ದಿ| ಹಸನ್-ಅಲೀಮ ದಂಪತಿಯ ಪುತ್ರನಾದ ಮೃತರು ಪತ್ನಿ ಅಸ್ಮಾ, ಮಕ್ಕಳಾದ ತಸ್ಲೀಮ, ತೌಸೀಫ್, ಅಳಿಯ ಅನ್ಸಾರಿ, ಸಹೋದರ-ಸಹೋದರಿಯರಾದ ಅಬ್ದುಲ್ ಖಾದರ್, ಅಬ್ದುಲ್ ರಹ್ಮಾನ್, ಅಬ್ದುಲ್ ಅಸೀಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY