ಬದಿಯಡ್ಕದಲ್ಲಿ ಬಟ್ಟೆ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ

0
52

ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಇಂದು ಬೆಳಿಗ್ಗೆ ಬೆಂಕಿ ತಗಲಿದ್ದು, ಭಾರೀ ನಾಶನಷ್ಟವುಂಟಾಗಿರುವುದಾಗಿ ದೂರಲಾ ಗಿದೆ. ಬದಿಯಡ್ಕ ಪೊಲೀಸ್ ಠಾಣೆ ಸಮೀಪ ಕಾರ್ಯಾಚರಿಸುವ ‘ಗಬ್ಬಾನ’ ಎಂಬ ಹೆಸರಿನ ಬಟ್ಟೆ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ.  ಇಂದು ಬೆಳಿಗ್ಗೆ ೮ ಗಂಟೆಗೆ ಅಂಗಡಿಯೊಳಗಿಂದ ಹೊಗೆಯೇಳುತ್ತಿರುವುದು ಕಂಡುಬಂದಿದೆ. ಕೂಡಲೇ ಸಮೀಪದ ಗೋಡೌನ್‌ನ ಕಾರ್ಮಿಕರು ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ.

ಬೆಂಕಿ ಆಕಸ್ಮಿಕದಿಂದ ಲಕ್ಷಾಂತರ ರೂಪಾಯಿಗಳ ನಾಶನಷ್ಟವುಂಟಾಗಿ ರುವುದಾಗಿ  ಅಂಗಡಿ ಮಾಲಕ ಉತ್ತರ ಪ್ರದೇಶ ನಿವಾಸಿಯೂ ಇದೀಗ  ಸೂರಂಬೈಲಿನಲ್ಲಿ ವಾಸಿಸುವ ಕುಮಾರ್ ಯಾನೆ ಮುನ್ನ ತಿಳಿಸಿದ್ದಾರೆ.

NO COMMENTS

LEAVE A REPLY