ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಸಂದರ್ಶನ ಆರಂಭ: ಜಿಲ್ಲೆಯಲ್ಲಿ ಇಂದು, ನಾಳೆ ಯೆಲ್ಲೋ ಅಲರ್ಟ್

0
68

 

ಕಾಸರಗೋಡು: ಅರಬೀ ಸಮುದ್ರದ ಮಧ್ಯ ಭಾಗದಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿದ್ದು ಅದರಿಂದಾಗಿ ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಉಂಟಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. 

ಇದರ ಹೊರತಾಗಿ ಬಂಗಾಳ ಕೊಲ್ಲಿಯ ಮಧ್ಯಭಾಗದಲ್ಲಿ ಸುಂಟರಗಾಳಿ ರೂಪುಗೊಂಡಿದ್ದು, ಅದು ವಾಯುಭಾರ ಕುಸಿತಕ್ಕೆ ದಾರಿ ಮಾಡಿ ಕೊಡಲಿದ್ದು ಉತ್ತರ ಕೇರಳದಲ್ಲಿ ಭಾರೀ ಮಳೆಗೆ ದಾರಿ ಮಾಡಿಕೊ ಡಲಿದೆ ಎಂದು ಇಲಾಖೆ ತಿಳಿಸಿದೆ.

ಕಾಸರಗೋಡು, ಕಣ್ಣೂರು ಮತ್ತು ಇಡುಕ್ಕಿ ಜಿಲ್ಲೆಗಳ ಕೆಲವು ಪ್ರದೇಶಗ ಳಲ್ಲಿ ಮಹಾ ಮಳೆ ಉಂಟಾಗುವ ಸಾಧ್ಯತೆಯೂ ಇದೆ. ಬಂಗಾಳ ಕೊಲ್ಲಿ ಸಮುದ್ರದ ೩.೧ರಿಂದ ೫.೮ ಕಿಲೋ ಮೀಟರ್ ತನಕ ವಿಸ್ತಾರದಲ್ಲಿ ಸುಂಟರಗಾಳಿ ರೂಪು ನೀಡತೊಡಗಿದೆ ಎಂದು ಇಲಾಖೆ ತಿಳಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ಮಳೆ ಈಗ ಅಲ್ಪಶಮನಗೊಂಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ತೆರೆದು ಕಾರ್ಯವೆಸಗತೊಡಗಿದೆ.

ಕಾಸರಗೋಡು, ಪತ್ತನಂತಿಟ್ಟ, ತೃಶೂರು, ಪಾಲ್ಘಾಟ್, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್  ಘೋಷಿಸಲಾಗಿದೆ. ಮಾತ್ರವಲ್ಲದೆ, ಕಾಸರಗೋಡು, ಪತ್ತನಂತಿಟ್ಟ, ತೃಶೂರು, ಪಾಲ್ಘಾಟ್, ಕಲ್ಲಿಕೋಟೆ, ಕಣ್ಣೂರು ಜಿಲ್ಲೆಗಳಲ್ಲಿ ನಾಳೆ ಮತ್ತು  ಅಗೋಸ್ತು ೧೫ರಂದು ಕಣ್ಣೂರು ಮತ್ತು ಅಗೋಸ್ತು ೧೬ರಂದು ಕಾಸರಗೋಡು ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಣ್ಣೂರು, ಆಲಪ್ಪುಳ, ಎರ್ನಾಕುಳಂ, ಇಡುಕ್ಕಿ, ಮಲಪ್ಪುರಂ, ವಯನಾಡು ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ವರ್ಷ ಮಳೆ ಸಕಾಲದಲ್ಲಿ ಸುರಿಯದಿ ದ್ದರೂ, ಬಳಿಕ ಧಾರಾಕಾರವಾಗಿ ಸುರಿಯತೊಡಗಿದೆ.  ಜುಲೈ ೩೧ರ ತನಕದ ಲೆಕ್ಕಾಚಾರ ಪ್ರಕಾರ ರಾಜ್ಯದಲ್ಲಿ ಮಳೆ ಪ್ರಮಾಣದಲ್ಲಿ ಶೇ. ೩೧ರಷ್ಟು ಕುಸಿತ ಉಂಟಾಗಿತ್ತು. ಆ ಬಳಿಕ ರಾಜ್ಯದಲ್ಲಿ ಸುರಿಯಲಾರಂಭಿ ಸಿದ ಮಳೆ ಕುಸಿತ ಪ್ರಮಾಣ ಈಗ ಶೇ. ೩ಕ್ಕೆ ಇಳಿದಿದೆ ಎಂದು ತಿರುವನಂತಪುರದಲ್ಲಿರುವ ಕೇಂದ್ರ ವಾತಾವರಣ ವಿಜ್ಞಾನ ಕೇಂದ್ರ (ಐ.ಎಂ.ಡಿ) ಲೆಕ್ಕಾಚಾರಗಳು ತಿಳಿಸಿವೆ.

ಮಳೆ ತೀವ್ರಗೊಂಡ ಬಳಿಕ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಕಾಸರಗೋಡು ಜಿಲ್ಲೆಯಲ್ಲಿ ಲಭಿಸಿದೆ. ೨೩೦.೩೬ ಸೆ.ಮಿ ಮಳೆ ಲಭಿಸಿದೆ. ಇದೆ ವೇಳೆ ಜೂನ್ ೧ರಿಂದ ನಿನ್ನೆ ತನಕ ಕಾಸರಗೋಡು ಜಿಲ್ಲೆಗೆ ಒಟ್ಟಾರೆಯಾಗಿ ಲಭಿಸಬೇಕಾದ ಮಳೆಯಲ್ಲಿ ಶೇ. ೨ರಷ್ಟು ಕುಸಿತ ಉಂಟಾಗಿದೆ.  ಜೂನ್ ೧ರಿಂದ ನಿನ್ನೆ ತನಕ ಜಿಲ್ಲೆಗೆ ಸರಾಸರಿ ೨೩೫.೧೪ ಮಳೆ ಲಭಿಸಬೇಕಾಗಿತ್ತು. ಅದರಲ್ಲಿ ೨೩೦.೩೬ ಸೆ.ಮಿ  ಮಳೆ ಮಾತ್ರವೇ ನಿನ್ನೆ ತನಕ ಲಭಿಸಿದೆ. ಇದೇ ವೇಳೆ ಈ ಅವಧಿಯಲ್ಲಿ ಪಾಲ್ಘಾಟ್ ಜಿಲ್ಲೆಗೆ ಶೇ. ೨೩, ಕಲ್ಲಿಕೋಟೆ ಶೇ. ೧೯ ಮತ್ತು ಕಣ್ಣೂರು ಶೇ. ೪ಹೆಚ್ಚು ಮಳೆ ಲಭಿ ಸಿದೆ ಎಂದು ಐ.ಎಂ.ಡಿ. ತಿಳಿಸಿದೆ. ಕಾಸರಗೋಡನ್ನು ಹೊರತುಪಡಿಸಿ ರಾಜ್ಯದ ೯ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಮಹಾ ಮಳೆಯಿಂದಾಗಿ ಅಸ್ತವ್ಯಸ್ತಗೊಂಡ ರೈಲು ಸೇವೆಯನ್ನು ಸಹಜ ಸ್ಥಿತಿಗೆ ತರಲು ಇನ್ನೂ ಒಂದು ವಾರ ಸಮಯಬೇಕಾಗಿ ಬಂದೀತ್ತೆಂದು ರೈಲ್ವೇ ಇಲಾಖೆ ತಿಳಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್ ಮುಖಂಡ ಹಾಗೂ ವಯನಾಡು ಸಂಸದರೂ ಆಗಿರುವ ರಾಹುಲ್ ಗಾಂಧಿ ಸಂದರ್ಶಿಸಿ ಸಂತ್ರಸ್ತ ಶಿಬಿರಗಳಿಗೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿದ್ದಾರೆ. ಅಗತ್ಯದ ಎಲ್ಲಾ ಸಹಾಯ ನೀಡಲಾಗುವುದು. ನಾನು ಸದಾ ನಿಮ್ಮೊಂದಿಗೆ ಇದ್ದೇನೆಂದು ಅವರು ಸಂತ್ರಸ್ತರಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಬೆಳಿಗ್ಗಿನಿಂದ ನೆರೆಪೀಡಿತ ಪ್ರದೇಶಗಳಿಗೆ ಸಂದರ್ಶನ ಆರಂಭಿಸಿದ್ದಾರೆ. ಹಣಕಾಸು ಸಚಿವ ಡಾ. ಥೋಮಸ್ ಐಸಾಕ್, ರಾಜ್ಯ ಮುಖ್ಯಕಾರ್ಯದರ್ಶಿ ಮತ್ತು ರಾಜ್ಯ ಪೊ ಲೀಸ್ ಮಹಾ ನಿರ್ದೇಶಕರೂ ಜತೆಗಿದ್ದಾರೆ.

NO COMMENTS

LEAVE A REPLY