ಡಿ.ಕೆ.ಶಿ. ಇ.ಡಿ ಕಸ್ಟಡಿಗೆ: ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಬೆಂಬಲಿಗರ ಪ್ಲಾನ್

0
28

ಬೆಂಗಳೂರು: ಅಕ್ರಮ ಸಂಪತ್ತು ಗಳಿಕೆಯ ಗಂಭೀರ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ, ಕನಕಪುರ ಶಾಸಕ ಡಿ.ಕೆ. ಶಿವಕುಮಾರ್  ಈತಿಂಗಳ ೧೩ರ ತನಕ  ಜಾರಿ ನಿರ್ದೇಶನಾಲಯ (ಇಡಿ) ಕಸ್ಟಡಿಗೆ ಬಿಟ್ಟುಕೊಟ್ಟ ದಿಲ್ಲಿಯ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರತಿಭಟಿಸಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿ ರುವ ಡಾಲರ್ಸ್ ಕಾಲನಿಯಲ್ಲಿರುವ ನಿವಾಸಕ್ಕೆ  ಮುತ್ತಿಗೆ ಹಾಕಲು ಡಿ.ಕೆ. ಶಿವಕುಮಾರ್ ಬೆಂಬಲಿಗರು ಪ್ಲಾನ್ ಹಾಕಿಕೊಂಡಿ ರುವು ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅದರಂತೆ ಮುಖ್ಯಮಂತ್ರಿ ನಿವಾಸ ಮತ್ತು ಪರಿಸರದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಡಿ.ಕೆ.ಶಿ ಬೆಂಬಲಿಗರು ಅದ್ಯಾವುದೇ ನಿಮಿಷವಾದರೂ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿ ಮುತ್ತಿಗೆ ಹಾಕಬಹದೆಂಬ ಮಾಹಿತಿ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಪೊಲೀಸರು     ಎಲ್ಲೆಡೆ ಕಟ್ಟೆಚ್ಚರ ಪಾಲಿಸತೊಡಗಿದ್ದಾರೆ. ಮಾತ್ರವಲ್ಲ ಮುಖ್ಯಮಂತ್ರಿ  ಯಡಿ ಯೂರಪ್ಪರ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಡಿ.ಕೆ.ಶಿ ಬಂಧನಕ್ಕೆ ರಾಜಕೀಯ ಬಣ್ಣ ನೀಡಿ ಅದು ಬಿಜೆಪಿ ಮಾಡಿದ ಷಡ್ಯಂತ್ರವಾಗಿದೆಯೆಂದು ಆರೋಪಿಸಿ  ಡಿಕೆಶಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು  ಮೈಸೂರಿನಾದ್ಯಂತ ಇಂದೂ  ಭಾರೀ ಹೋರಾಟದಲ್ಲಿ ತೊಡಗಿದ್ದಾರೆ. ಅದರಿಂದಾಗಿ ಮೈಸೂರಿನಲ್ಲಿ ಬಂದ್ ಪ್ರತೀತಿ ತಲೆದೋರುವಂತೆ ಮಾಡಿದೆ.

ಡಿ.ಕೆ.ಶಿಯವರ  ಸ್ವ ಕ್ಷೇತ್ರವಾದ ಕನಕಪುರದಲ್ಲಿ ನಿನ್ನೆಯಿಂದಲೇ ಬಂದ್ ಪ್ರತೀತಿ ಉಂಟಾಗಿದ್ದು ಅದು ಇಂದೂ ಮುಂದುವರಿಯುತ್ತಿದೆ.

 

NO COMMENTS

LEAVE A REPLY