ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಕೈವಶವಿರಿಸಿದ ವ್ಯಕ್ತಿಗೆ ಜುಲ್ಮಾನೆ

0
27

ಕಾಸರಗೋಡು: ನಿಗದಿತ ಪ್ರಮಾ ಣಕ್ಕಿಂತ ಹೆಚ್ಚು ಮದ್ಯ ಕೈವಶವಿರಿಸಿ ದಕ್ಕೆ ಸಂಬಂಧಿಸಿ ಅಬಕಾರಿ ತಂಡ ದಾಖಲಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ(೧) ೪೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಬೇಳ ರತ್ನಗಿರಿಯ ರೋಬರ್ಟ್ ಡಿ’ಸೋಜಾ(೫೧) ಎಂಬಾತನಿಗೆ ಈ ಜುಲ್ಮಾನೆ ವಿಧಿಸಲಾಗಿದೆ. ಕಳೆದ ಮಾರ್ಚ್ ೨೦ರಂದು ಧರ್ಮತ್ತಡ್ಕದಲ್ಲಿ ಈತ ಚಲಾಯಿಸುತ್ತಿದ್ದ ಸ್ಕೂಟರ್‌ನ್ನು ಅಬಕಾರಿ ತಂಡ ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ನಾಲ್ಕೂವರೆ ಲೀಟರ್ ಮದ್ಯ ಪತ್ತೆಯಾಗಿದೆ. ಅದಕ್ಕೆ ಸಂಬಂಧಿಸಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಮದ್ಯ ಕೈವಶವಿರಿಸಿಕೊಂಡ ಆರೋಪದಂತೆ ಆತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಆ ಪ್ರಕರಣಕ್ಕೆ ಜುಲ್ಮಾನೆ ವಿಧಿಸಲಾಗಿದೆ.

NO COMMENTS

LEAVE A REPLY